ಕನ್ಯಾ ನೀಡಲು ನಿರಾಕರಿಸಿದ್ದಕ್ಕೆ, ಕನ್ಯೆಯನ್ನೆ ಕೊಲೆಗೈದ ವ್ಯಕ್ತಿಗೆ ಜೀವಾವಧಿ ಶಿಕ್ಷೆ..!
ವಿಜಯಪುರ : ಕನ್ಯಾ ನೀಡಲು ನಿರಾಕರಿಸಿದ್ದಕ್ಕೆ, ಕನ್ಯೆಯನ್ನೆ ಕೊಲೆಗೈದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ಹಾಗೂ 26 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಮೂಲತಃ ಜೇವರ್ಗಿ ತಾಲೂಕಿನ ಹಾಗೂ ಹಾಲಿ ಇಂಡಿ ತಾಲ್ಲೂಕಿನ ಬುಯ್ಯಾರ ಗ್ರಾಮದ ವಿಶ್ವೇಶ್ವರಯ್ಯ ಲೋಟಯ್ಯ ಹಿರೇಮಠ ಶಿಕ್ಷಕೆಗೆ ಗುರಿಯಾದ ಆರೋಪಿ. ಬುಯ್ಯಾರ ಗ್ರಾಮದ ಶಿವರುದ್ರಯ್ಯ ಹಿರೇಮಠ ಎಂಬುವರು ಆರೋಪಿಗೆ ಮಗಳು ದಾನಮ್ಮಳನ್ನ ಮದುವೆ ಮಾಡಿಕೊಡಲು ಮುಂದಾಗಿದ್ದರು. ಆದರೆ, ಶಿವರುದ್ರಯ್ಯ ಪತ್ನಿ ಅನ್ನಪೂರ್ಣ ಮಗಳನ್ನು ಕೊಡಲು ನೀರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಕುಪಿತಗೊಂಡ ಆರೋಪಿ ಧಾನಮ್ಮಳನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದೆನೆಂದು ಇಂಡಿ ಗ್ರಾಮೀಣ ಪೋಲಿಸ್ ಠಾಣಾ ಯಲ್ಲಿ ಪ್ರಕರಣ ದಾಖಲಾಗಿತ್ತು. ಪೋಲಿಸರು ಆರೋಪಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶ ಸುಭಾಸ ಸಂಕದ ಅವರು, ಸಾಕ್ಷಿ ಪರಿಶೀಲಿಸಿ, ಆರೋಪಿ ಮೇಲಿನ ಅಪಾದನೆ ರುಜುವಾತವಾಗಿದೆ ಎಂದು ತಿರ್ಮಾನಿಸಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಲ್ಲದೆ ಕೋಲೆಗಿಡಾದ ಧಾನಮ್ಮಳ ತಂದೆ, ತಾಯಿಗೆ ಜಿಲ್ಲಾ ಕಾನೂನು ಸೇವಾ ಸಮಿತಿ ಸೂಕ್ತ ಪರಿಹಾರ ನೀಡಬೇಕೆಂದು ತೀರ್ಪಿನಲ್ಲಿ ಆದೇಶಿಸಿದ್ದಾರೆ. ಅಭಿಯೋಗದ ಪರವಾಗಿ 1 ನೇ ಅಧಿಕ ಸರಕಾರಿ ಅಭಿಯೋಜಕಿ ಕವಿತಾ ಇಟಗಿ ವಾದ ಮಂಡಿಸಿದರು.