ಸೆ.4 ರಂದು ಆದರ್ಶ ವಿದ್ಯಾಲಯ ದಾಖಲಾತಿಗೆ ಕೌನ್ಸಲಿಂಗ್
ಇಂಡಿ: ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ 2024-25 ನೇ ಸಾಲಿನ 6 ನೇ ತರಗತಿಗೆ ಅಂತಿಮ ಹಂತದ ದಾಖಲಾತಿಯನ್ನು ಪೂರ್ಣಗೊಳಿಸಲು ಮೂರನೇ ಹಂತದಿಂದ ನಾಲ್ಕು ಹಂತದವರೆಗೂ ಆಯ್ಕೆಯಾದ ಮಕ್ಕಳನ್ನು ಹೊರತುಪಡಿಸಿ ಮೀಸಲಾತಿ ಅನ್ವಯ ಕೌನ್ಸಲಿಂಗ ಮೂಲಕ ವಿದ್ಯಾರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ.
ಸೆ.4 ರಂದು ಬೆಳಿಗ್ಗೆ 10.30 ಗಂಟೆಗೆ ದಾಖಲಾತಿ ಪ್ರಕ್ರೀಯೆ ಆರಂಭಗೊಳ್ಳುತ್ತದೆ. ಸಂಬಂಧಿಸಿದ ಮಕ್ಕಳ ಪಾಲಕರು,ಪೊಷಕರು ತಪ್ಪದೆ ಸರ್ಕಾರಿ ಆದರ್ಶ ವಿದ್ಯಾಲಯ ಇಂಡಿ ಇಲ್ಲಿಗೆ ಹಾಜರಾಗಬೇಕು.ಈ ನಾಲ್ಕು ಹಂತದ ಪ್ರಕ್ರಿಯೆ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿತ್ತು.ಬಿಇಒ ಕಾರ್ಯಾಲಯ ಹಾಗೂ ಶಾಲಾ ನೋಟಿಸ್ ಬೊರ್ಡಿಗೆ ಅಂಟಿಸಲಾಗಿತ್ತು. ಆದರೂ ಕೂಡಾ ಕೆಲವೊಂದು ಪಾಲಕರು ಕೌನ್ಸಿಲಿಂಗ್‌ಗೆ ಹಾಜರಾಗಿರುವುದಿಲ್ಲ. ಕೌನ್ಸಲಿಂಗ್‌ಗೆ ಬರುವಾಗ ಮಕ್ಕಳ ಪಾಲಕರು ಸೂಕ್ತ ದಾಖಲೆಗಳನ್ನು ತರಬೇಕು ಎಂದು ಬಿಇಒ ಟಿ.ಎಸ್,ಆಲಗೂರ, ಆದರ್ಶ ವಿದ್ಯಾಲಯದ ಮುಖ್ಯೋಪಾದ್ಯಯ ಎಸ್.ಜಿ.ಬನಸೋಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮುಖ್ಯೊಪಾದ್ಯಯ ಮೊ.8970716054 ಹಾಗೂ ಪ್ರದಸ ವಿನೋದ ಮೊ. 6360904885 ಸಂಖ್ಯೆಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.