ಇಂಡಿ : ಸಬ್ ರೆಜಿಸ್ಟಾರ್ ಕಚೇರಿಯಲ್ಲಿ ಲಂಚಾವತಾರ ಆರೋಪಗಳು ಕೇಳಿ ಬಂದಿವೆ. ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಸಬ್ ರೆಜಿಸ್ಟಾರ್ ಕಚೇರಿಯಲ್ಲಿ ದಲ್ಲಾಳಿಗಳು ಬೀಡು ಬಿಟ್ಟಿದ್ದಾರೆ. ಸಬ್ ರೆಜಿಸ್ಟಾರ್ ಮೊಹಮ್ಮದರಫಿ ಪಟೇಲ್ ಎದುರಲ್ಲೇ ಅವ್ಯವಹಾರ ಮಾಡಲಾಗುತ್ತಿದೆ ಎಂದು ಆರೋಪಗಳು ಕೇಳಿ ಬಂದಿವೆ. ಇನ್ನು ಸರ್ಕಾರ ನಿಗದಿ ಮಾಡಿದ ಶುಲ್ಕ ಭರಿಸದ ಹೊರತಾಗಿ ಲಂಚ ನೀಡಿದರೆ ಮಾತ್ರ ಕೆಲಸಗಳು ಆಗುತ್ತಿವೆ. ಎಜೆಂಟರು ಹಣ ಕೇಳುವುದು ಹಾಗೂ ಹಣ ಪಡೆಯುತ್ತಿರುವ ದೃಶ್ಯ ಸ್ಥಳೀಯರು ಮೊಬೈಲ್ ನಲ್ಲಿ ಸೆರೆಯಾಗಿದೆ.