ವಿಜಯಪುರ : ಮಹಾನಗರ ಪಾಲಿಕೆ ಚುನಾವಣೆಗೆ ತಡೆಯಾಜ್ಞೆ ನೀಡಬೇಕೆಂದು ಸಲ್ಲಿಕೆಯಾಗಿದ್ದ ರಿಟ್ ಪಿಟಿಷನ್ ಅರ್ಜಿ ವಜಾಗೊಳಿಸಿ ಕಲಬುರಗಿ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಇನ್ನು ಮಹಾನಗರ ಪಾಲಿಕೆ ಚುನಾವಣೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದ ಆಕಾಂಕ್ಷಿ ಅಭ್ಯರ್ಥಿಗಳು ನಿರಾಳರಾಗಿದ್ದಾರೆ.
ಇದೇ ಅಕ್ಟೋಬರ್ 28 ಕ್ಕೆ ಚುನಾವಣೆ ನಡೆಸಲು ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿತ್ತು.
ಕಳೆದ ಸಪ್ಟೆಂಬರ್ 27 ಕ್ಕೆ ಸಲ್ಲಿಕೆಯಾಗಿದ್ದ ರಿಟ್ ಪಿಟೀಷನ್ ವಜಾಗೊಳಿಸಿ ಕಲಬುರಗಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ನಿಗದಿಯಂತೆ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ.
ಚುನಾವಣೆಗೆ ತಡೆಯಾಜ್ಞೆ ನೀಡ ಬೇಕೆಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ದೀಪಾ ಕುಂಬಾರ ಮಾಜಿ ಪಾಲಿಕೆ ಸದಸ್ಯರಾದ ಮೈನುದ್ದೀನ್ ಬೀಳಗಿ, ಇದ್ರೂಸ್ ಭಕ್ಷಿ ಅವರಿಂದ ರಿಟ್ ಪಿಟೀಷನ್ ಸಲ್ಲಿಕೆಯಾಗಿತ್ತು. ನೂತನ ಪರಿಷೃತ ಮೀಸಲಾತಿ ಪಟ್ಟಿಯಲ್ಲಿ ಶೇಕಡಾ 50 ರಷ್ಟು ಸ್ಥಾನಗಳನ್ನು ಮಹಿಳೆ ಯರಿಗೆ ನೀಡಿಲ್ಲ. ಅವೈಜ್ಞಾನಿಕ ವಾರ್ಡ್ ಗಳ ವಿಂಗಡನೆ ಮಾಡಲಾಗಿದೆ. 26 ವಾರ್ಡ್ ಗಳಲ್ಲಿ ಮೀಸಲಾತಿ ಬದಲಾ ವಣೆ ಹಾಗೂ ಇತರೆ ಕಾರಣ ಉಲ್ಲೇಖಿಸಿ ರಿಟ್ ಪಿಟೀಷನ್ ಸಲ್ಲಿಸಿದ್ದರು.
ಬೆಂಗಳೂರಿನ ಹಿರಿಯ ನ್ಯಾಯವಾದಿ ಕೆ. ದಿವಾಕರ ನ್ಯಾಯವಾದಿಗಳಾದ ಎಂ ಎ ದಖನಿ ಹಾಗೂ ಎಸ್ ಎಸ್ ಮಮದಾಪೂರ ಅರ್ಜಿದಾರರ ಪರ ವಕಾಲತ್ತು ವಹಿಸಿದ್ದರು. ಚುನಾವಣಾ ಆಯೋಗದ ಹಾಗೂ ವಿಜಯಪುರ ಮಹಾನಗರ ಪಾಲಿಕೆ ಪರವಾಗಿ
ನ್ಯಾಯವಾದಿ ಅಮರೇಶ ರೋಝಾ ವಾದ ಮಂಡಿಸಿದ್ದರು.