ಸಂವಿಧಾನ ಪೀಠಿಕೆ ಓದುವದು ಸರಕಾರದ ಮಹತ್ವ ಹೆಜ್ಜೆ ; ಆಬೀದ್ ಗದ್ಯಾಳ
ಇಂಡಿ : ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಜಗತ್ತಿಗೆ ಸಾರುವ ಮೂಲಕ ಪ್ರಜಾಪ್ರಭುತ್ವದ ಮೂಲ ಉದ್ದೇಶವನ್ನು ಸಾರುತ್ತಿರುವ ಮಾದರಿ ರಾಷ್ಟ್ರವಾಗಿದೆ ಎಂದು ಉಪವಿಭಾಗ ಅಧಿಕಾರಿ ಆಬೀದ್ ಗದ್ಯಾಳ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ತದನಂತರ ಶಾಲಾ, ಕಾಲೇಜು ಹಾಗೂ ವಿವಿಧ ಸಂಘಟನೆ ಮತ್ತು ಸಾರ್ವಜನಿಕರ ಸಹಯೋಗದಲ್ಲಿ ಸಂವಿಧಾನ ಪೀಠಿಕ್ಕೆ ಓದುವ ಸಂದರ್ಭ ಅದ್ದೂರಿಯಾಗಿ ಜರುಗಿತು.
ಇನ್ನೂ ಪ್ರಜಾಪ್ರಭುತ್ವ ಎಂದರೆ ಪ್ರಜೆಗಳ ಆಳ್ವಿಕೆ. ಸಂವಿಧಾನ ಎಂದರೆ ಹಕ್ಕುಗಳು, ಕರ್ತವ್ಯಗಳು, ತತ್ವಗಳು ಮತ್ತು ಕಾನೂನಿನ ಮೂಲಕ ಪ್ರಜಾ ಪ್ರಭುತ್ವದ ಆಶಯವನ್ನು ಎತ್ತಿ ಹಿಡಿಯುವ ಪವಿತ್ರ ಗ್ರಂಥ. ಈ ಆಶಯದೊಂದಿಗೆ ಆಚರಿಸಲಾಗುತ್ತಿರುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು “ನಾವು ಭಾರತದ ಜನರು’ ಎಂಬ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ವಾಚನ ಮಾಡುವ ಮೂಲಕ ವಿಶಿಷ್ಠ ದಾಖಲೆ ನಿರ್ಮಿಸುವ ಕರ್ನಾಟಕ ಸರ್ಕಾರದ ಅಭಿಯಾನ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಇನ್ನೂ ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಬಿ.ಎಸ್ ಕಡಕಬಾವಿ ಮಾತಾನಾಡಿದ ಅವರು, ಪೀಠಿಕೆಯು ಆರ್ಥಿಕ, ಸಾಮಾಜಿಕ, ರಾಜಕೀಯ ಸಮಾನತೆಗಳನ್ನು ಒಳಗೊಂಡ ನ್ಯಾಯಯುತ ಸಮಾಜವನ್ನು ಸೃಷ್ಟಿಸುವ ಮತ್ತು ಎಲ್ಲರನ್ನೂ ಒಳಗೊಂಡು ಪ್ರಗತಿ ಸಾಧಿಸಲು ಪ್ರೇರಣೆಯಾಗಿದೆ. ಈ ಮೂಲಕ ಪ್ರತಿಯೊಬ್ಬ ವ್ಯಕ್ತಿಗೆ ಆತನ ಮೂಲಭೂತ ಹಕ್ಕು ಒದಗಿಸಿ ಮತ್ತು ಘನತೆಯನ್ನು ಹೆಚ್ಚಿಸಿ ಆಪ್ತತೆಯ ವಾತಾವರಣ ರೂಪಿಸುತ್ತದೆ. ಜೊತೆಗೆ ವೈಯಕ್ತಿಕ ಸ್ವಾತಂತ್ರ್ಯ ಕ್ಕೂ ಅನುವು ಮಾಡಿಕೊಡುತ್ತಿದೆ ಎಂದರು. ವಿಧ್ಯಾರ್ಥಿಗಳು ಭವಿಷ್ಯತ್ತಿನ ಪ್ರಜೆಗಳು ಹಾಗೂ ದೇಶವನ್ನು ಆಳವರು. ಹಾಗಾಗಿ ಸಂವಿಧಾನ ಪೀಠಿಕೆಯನ್ನು ಮನದಟ್ಟು ಮಾಡಿಕೊಂಡು ಅನುಸರಿಸಬೇಕು ಎಂದು ಹೇಳಿದರು. ಬಿ ಅರ್ ಪಿ ಗೊರನಾಳ ನಿರೂಪಿಸಿದರು.
ಈ ಸಂದರ್ಭದಲ್ಲಿ ಡಿ ವಾಯ್ ಎಸ್ ಪಿ ಜಗದೀಶ್ ಎಸ್.ಎಚ್, ತಾ.ಪಂ ಅಧಿಕಾರಿ ಸುನೀಲ್ ಮದ್ದಿನ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಜೆ. ಇಂಡಿ, ಗ್ರೇಡ್ ೨ ತಹಶಿಲ್ದಾರ ಧನಪಾಲಶೆಟ್ಟಿ ದೇವೂರ, ಶಿರಸ್ತೆದಾರ ಬಿ.ಎ. ರಾವೂರ ಹಾಗೂ ಶಾಲಾ ಕಾಲೇಜು ಶಿಕ್ಷಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.