ಪಕ್ಷಿ ಸಂಕುಲದ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಸಮಾಜ ಸೇವಕ ಬಸನಗೌಡ ಪಾಟೀಲ ಸರೂರ
ಮುದ್ದೇಬಿಹಾಳ: ಬೇಸಿಗೆಯ ಕಠಿಣ ದಿನಗಳಲ್ಲಿ ಕುಡಿಯುವ ನೀರು ಮತ್ತು ಆಹಾರವಿಲ್ಲದೇ ಸಂಕಷ್ಟಕ್ಕೀಡಾಗುವ ಪ್ರಾಣಿ-ಪಕ್ಷಿಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಮಾನವೀಯ ಕರ್ತವ್ಯವಾಗಿದೆ,” ಎಂದು ಸಮಾಜ ಸೇವಕ ಬಸನಗೌಡ ಪಾಟೀಲ ಸರೂರ ಹೇಳಿದರು.
ಪಟ್ಟಣದ ಹಸಿರು ತೋರಣ ಉದ್ಯಾನವನದಲ್ಲಿ ‘ಹಸಿರು ತೋರಣ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಗುಬ್ಬಚ್ಚಿ ದಿನದ ಅಂಗವಾಗಿ ಪಕ್ಷಿಗಳಿಗೆ ಮಣ್ಣಿನ ನೀರಿನ ಪಾತ್ರೆ ಹಾಗೂ ಧಾನ್ಯ ವಿತರಿಸಿ ಅವರು ಮಾತನಾಡಿದರು.
ಮಾನವೀಯ ಕಾರ್ಯಕ್ಕೆ ಕರೆ:
ಜನರು ತಮ್ಮ ವೈಯಕ್ತಿಕ ಸಂಭ್ರಮಗಳಾದ ಮದುವೆ ವಾರ್ಷಿಕೋತ್ಸವ, ಮಕ್ಕಳ ಹುಟ್ಟುಹಬ್ಬದ ಸಂದರ್ಭದಲ್ಲಿ ಅನಗತ್ಯವಾಗಿ ದುಂದುವೆಚ್ಚ ಮಾಡುವ ಬದಲು, ಪರಿಸರ ಪ್ರೇಮದಿಂದ ಗಿಡಗಳನ್ನು ನೆಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು. ಪ್ರತಿಯೊಬ್ಬರೂ ತಮ್ಮ ಮನೆಯ ಮುಂದೆ, ಕಾಂಪೌಂಡ್ ಅಥವಾ ಮಾಳಿಗೆಯ ಮೇಲೆ ಪಕ್ಷಿಗಳಿಗೆ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು.
ಪರಿಸರ ಸಮತೋಲನದಲ್ಲಿ ಪಕ್ಷಿಗಳ ಪಾತ್ರ:
ಹಸಿರು ತೋರಣ ಬಳಗದ ಅಧ್ಯಕ್ಷ ಅಮರೇಶ ಗೂಳಿ ಮಾತನಾಡಿ, “ನಮ್ಮ ಬಳಗವು ಪ್ರತಿ ವರ್ಷವೂ ಪಕ್ಷಿ ಸಂಕುಲವನ್ನು ಉಳಿಸುವ ನಿಟ್ಟಿನಲ್ಲಿ ಗುಬ್ಬಚ್ಚಿ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಾ ಬಂದಿದೆ,” ಎಂದರು. ಸಂಚಾಲಕ ಮಹಾಬಲೇಶ್ವರ ಗಡೇದ ಮಾತನಾಡಿ, ಗುಬ್ಬಚ್ಚಿಗಳು ರೈತನ ಮಿತ್ರರಾಗಿದ್ದು, ಪರಿಸರದ ಸಮತೋಲನ ಕಾಪಾಡುವಲ್ಲಿ ಇವುಗಳ ಪಾತ್ರ ದೊಡ್ಡದಿದೆ ಎಂದು ತಿಳಿಸಿದರು.
ಬಳಗದ ಮಾಜಿ ಅಧ್ಯಕ್ಷ ರವಿ ಗೂಳಿ ಮಾತನಾಡಿ, ಈ ಭೂಮಿಯ ಮೇಲೆ ಪ್ರಾಣಿ-ಪಕ್ಷಿಗಳಿಗೂ ಜೀವಿಸುವ ಹಕ್ಕಿದೆ, ಅವುಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಎಚ್.ವೈ.ಪಾಟೀಲ ಹಾಗೂ ಡಾ. ವೀರೇಶ ಇಟಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಳಗದ ಕಾರ್ಯದರ್ಶಿ ಬಸವರಾಜ ಬಿಜ್ಜೂರ, ಉಪಾಧ್ಯಕ್ಷ ವಿಲಾಸರಾವ್ ದೇಶಪಾಂಡೆ, ಗೌರವಾಧ್ಯಕ್ಷ ಸೋಮಶೇಖರ ಚೀರಲದಿನ್ನಿ, ಮಾಜಿ ಅಧ್ಯಕ್ಷರಾದ ನಾಗಭೂಷಣ ನಾವದಗಿ, ಅಶೋಕ ರೇವಡಿ, ಬಿ.ಎಸ್.ಮೇಟಿ, ರಾಜಶೇಖರ ಕಲ್ಯಾಣಮಠ, ಬಿ.ಎಚ್.ಬಳಬಟ್ಟಿ, ಸದಸ್ಯರಾದ ಮಲ್ಲಿಕಾರ್ಜುನ ಬಾಗೇವಾಡಿ, ಸುರೇಶ ಕಲಾಲ, ವೆಂಕನಗೌಡ ಪಾಟೀಲ, ಜಿ.ಎಂ.ಹುಲಗಣ್ಣಿ, ಪರಶುರಾಮ ಕೂಡಗಿ, ವೀರೇಶ ಢವಳಗಿ, ವೀರೇಶ ಹಂಪನಗೌಡ್ರ, ಡಾ. ವಿಜಯಕುಮಾರ ಗೂಳಿ, ಅಮರೇಶ ಐಹೊಳೆ, ಬಿ.ಎಂ.ಪಲ್ಲೇದ, ವಿನಯ ಹಿರೇಮಠ, ಡಾ. ಚಂದ್ರಶೇಖರ ಶಿವಯೋಗಿಮಠ, ಮಹೇಶ ಕೆಂದೂಳಿ, ವಿರುಪಾಕ್ಷಿ ಪತ್ತಾರ, ವಿನಯ ಗಡೇದ, ಪ್ರೀತಮ ಕೆಂದೂಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಹಾಬಲೇಶ್ವರ ಗಡೇದ ಕಾರ್ಯಕ್ರಮ ನಿರೂಪಿಸಿದರು, ಬಸವರಾಜ ಬಿಜ್ಜೂರ ವಂದಿಸಿದರು.


















