ಲಿಂಗಸೂಗೂರು: ಕ್ಷೇತ್ರದ ಬದಲಾವಣೆಯನ್ನು ಬಯಸಿ ಗ್ರಾಮೀಣ ಭಾಗದ ಜನರು ಬಿಜೆಪಿ ಪಕ್ಷದತ್ತ ಮುಖ ಮಾಡುತ್ತಿದ್ದಾರೆ. 35 ಕ್ಕೂ ಹೆಚ್ಚು ಜನರು ಇಂದು ಅಧಿಕೃತವಾಗಿ ಕೊರಳಿಗೆ ಬಿಜೆಪಿ ಚಿನ್ಹೆ ಹೊಂದಿರುವ ಕೇಸರಿ ಶಾಲನ್ನು ಹಾಕಿಕೊಂಡು ಬಿಜೆಪಿ ಪಕ್ಷವನ್ನು ಸೇರಿದ್ದಾರೆ. ತಾಲೂಕಿನ ಜಂಗೀರಾಂಪೂರ ತಾಂಡಾದ ಮಾಜಿ ಗ್ರಾಂ.ಪಂ. ಉಪಾಧ್ಯಕ್ಷ, ಸದಸ್ಯರು ಸೇರಿದಂತೆ ಇತರ ಪಕ್ಷದ ಮುಖಂಡರು ಹಟ್ಟಿ ಚಿನ್ನದ ಗಣಿ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಮಾನಪ್ಪ ವಜ್ಜಲ್ ನೇತೃತ್ವದಲ್ಲಿ ತಾಲೂಕಿನ ಬಿಜೆಪಿ ಕಾರ್ಯಲಯದಲ್ಲಿ ಪಕ್ಷ ಸೆರ್ಪಡೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾದ ವೀರನಗೌಡ ಪಾಟೀಲ್, ಮುಖಂಡರಾದ ಗೀರಿಮಲ್ಲನಗೌಡ ಮಾಲಿ ಪಾಟೀಲ್, ಜಿವಲ್ಯಪ್ಪ ನಾಯ್ಕ, ರಾಮನಗೌಡ ನಾಗರಹಾಳ, ಹುಲ್ಲೇಶ ಸಾಹುಕಾರ್, ಪುರಪ್ಪ ಜಂಗಿರಾಪುರತಾಂಡ, ಶೆಟೇಪ್ಪ ಮತ್ತಿತರರು ಭಾಗವಹಿಸಿದ್ದರು.