ಇಂಡಿ : ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವಥ್ ನಾರಾಯಣ ಮಾತನಾಡುವ ವೇಳೆ ಸಂಸದ ಡಿ.ಕೆ.ಸುರೇಶ್ ಹಾಗೂ ಎಮ್ಎಲ್‌ಸಿ ರವಿ ಮೈಕ್ ಕಿತ್ತುಕೊಂಡಿರುವುದನ್ನು ಖಂಡಿಸಿ, ಸಂಸದ ಡಿಕೆ ಸುರೇಶ ಹಾಗೂ ವಿಧಾನ ಪರಿಷತ್ ಸದಸ್ಯ ರವಿ ಗೂಂಡಾವರ್ತನೆ ವಿರುದ್ಧ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಆಡಳಿತ ಸೌಧದ ಎದುರು ತಾಲ್ಲೂಕು ಮಂಡಳ ಬಿಜೆಪಿ ಯುವ ಮೂರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶಿಲ್ದಾರ ಆರ್ ಎಸ್ ರೆವಡಿಗರ ಅವರಿಗೆ ಮನವಿ ಸಲ್ಲಿಸಿದರು.
ನಗರದ ಬಸವೇಶ್ವರ ಸರ್ಕಲ್‌ದಿಂದ ಕಚೇರಿಯ ವರೆಗೂ ಮೆರವಣಿಗೆ ನಡೆಸಿದರು. ಸಂಸದ ಡಿಕೆ ಸುರೇಶ ಹಾಗೂ ಎಂಎಲ್‌ಸಿ ರವಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಸಚಿವ ಅಶ್ವಥನಾರಾಯಣ ಅವರ ಭಾಷಣಕ್ಕೆ ಅಡ್ಡಿ ಪಡಿಸಿದ್ದು ಖಂಡನೀಯ. ಇಂತಹ ಗುಂಡಾ ವರ್ತನೆಗೆ ಮುಂದಿನ ದಿನಗಳಲ್ಲಿ ಮತದಾರರು ತಕ್ಕಪಾಠ ಕಲಿಸುತ್ತಾರೆ ಎಂದರು. ವಿರೋಧ ಪಕ್ಷದಲ್ಲಿದ್ದು ಗೂಂಡಾವರ್ತನೆ ಮಾಡುವುದು ಸಲ್ಲದು. ಅದಕ್ಕಾಗಿ ಮುಂದಿನ ದಿನಗಳಲ್ಲಿ ಗೂಂಡಾವರ್ತನೆ ಬಿಟ್ಟು ಅಭಿವೃದ್ಧಿ ಮಂತ್ರ ಜಪ್ ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಮೂರ್ಚಾ ಅಧಕ್ಷ ಕಾಸುಗೌಡ ಬಿರಾದಾರ ಮಾತಾನಾಡಿ, ಪ್ರಜಾ ಪ್ರಭುತ್ವ ಕಗ್ಗೊಲೆಯಾಗುತ್ತಿದೆ. ಸಾರ್ವಜನಿಕ ಮತ್ತು ರಾಜ್ಯದ ಮುಖ್ಯ ಮಂತ್ರಿ ಎದುರೇ ಬ್ರಷ್ಟ ಕಾಂಗ್ರೆಸ್ ಪಕ್ಷದ ಮುಖಂಡರ ಗುಂಡಾಗಿರಿ ಕಾಣುತ್ತಿದೆ. ಅಭಿವೃದ್ಧಿ ಪ್ರಗತಿ ಬಗ್ಗೆ ಏನಾದರೂ ಪ್ರಶ್ನೆ ಮಾಡುದಾದರೆ ವಿಧಾನ ಸೌಧದಲ್ಲಿ ಮಾಡಬೇಕು. ಅದನ್ನು ಬಿಟ್ಟು ಗುಂಡಾಗಿರಿ ಮಾಡುತ್ತಾರೆ ಎಂದರೆ, ಅದನ್ನು ತೀವ್ರವಾಗಿ ಖಂಡಿಸುತ್ತೆವೆ. ಅವರ ಮೇಲೆ ಸರಕಾರ ನಿರ್ದಾಕ್ಷಿಣ್ಯವಾಗಿ ಕಾನೂನಾತ್ಮಕ ಕ್ರಮ ಜರಗಿಸಬೇಕು ಎಂದು ಒತ್ತಾಯ ಮಾಡುತ್ತೆನೆ ಎಂದು ಹೇಳಿದರು.
ಪ್ರತಿಭಟನೆ ಉದ್ದೇಶಿಸಿ ಮಾತಾನಾಡಿದ ಬಿಜೆಪಿ ಮುಖಂಡ ಹಣಮಂತರಾಯಗೌಡ ಪಾಟೀಲ್, ಪಟ್ಟಣದಲ್ಲಿ ಅಂಬೇಡ್ಕರ್ ಯುವಕ ಮಂಡಳಿ ಆಯೋಜಿಸಿರುವ ಭೀಮಾ ಕೊರಸಗಾಂವ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಅತ್ಯಂತ ಸಾದಾ ವ್ಯಕ್ತಿ, ಎಲ್ಲೊ ಹತ್ತು ರೂಪಾಯಿ ತೆಗೆದುಕೊಂಡು ಕುಡಿದ ಬಂದು ನಮ್ಮ ಭಾಗದ ಶಾಸಕರಿಗೆ ಒಂದು ಎರಡು ಶಬ್ದ ಬೈದಾಗ, ಶಾಸಕರು ನಾನು ಭೀಮಾ ತೀರದಿಂದ ಬಂದವನು ಎಂದು ಹೇಳುತ್ತಾರೆ.
ಎಲ್ಲರೂ ತಾಯಿ ಗರ್ಭದಿಂದಲೇ ಬಂದವರು,ಎಲ್ಲರಲ್ಲೂ ಕೋಪ,ತಾಪ ಇದ್ದೆ ಇರುತ್ತದೆ. ಆದರೆ ಇವತ್ತು ಈ ನಾಡಿನ ಜನ ನಿಮ್ಮನ್ನ ದೊಡ್ಡವರನ್ನಾಗಿ ಮಾಡಿ ಕೂಡಿಸಿದ್ದಾರೆ. ನಿಮಗೆ ಚಿಕ್ಕವರು ಬೈದಾಗ ಅದು ಹೂವಿನ ಹಾರವಾಗಿ ಸ್ವೀಕಾರ ಮಾಡಬೇಕು. ಅದು ದೊಡ್ಡವರ ಅಂತಾ ಮಾಡಿದಕ್ಕೂ ಸ್ವಾರ್ಥಕ ಆಗುತ್ತದೆ. ಆದರೆ ಅದನ್ನು ಬಿಟ್ಟು ವೇದಿಕೆ ಮೇಲೆ ಚಿಕ್ಕವರ ಜೊತೆ ಜಗಳ ಮಾಡುತ್ತೀರಿ ಎಂದರೆ, ಇದು ಏನೂ ಒಂದು ಕೆಟ್ಟ ಶಕುನ ಬರುವ ವಿಧಾನ ಸಭೆ ಚುನಾವಣೆಯಲ್ಲಿ ನಿಮಗೆ ಸೋಲು ಸಮೀಪ ಬಂದಂತೆ ಎಂದರು. ಮುಂದಿನ ಚುನಾವಣೆಯ ಆಧಾರ ಇಟ್ಟುಕೊಂಡು 4 ವರ್ಷದ ಮಾಡದ ಅಂಬೇಡ್ಕರ್ ಮೂರ್ತಿ ಒಂದೇ ವರ್ಷದಲ್ಲಿ ಮಾಡುತ್ತೆನೆ ಎಂದು ಹೇಳುತ್ತಿರಿ ಎಂದರೆ, ದಲಿತರೇನು ಭಿಕ್ಷುಕರಾ, ಅವರ ಅಂಬೇಡ್ಕರ್ ಮೂರ್ತಿ ಅವರು ಮನ್ಸದ ಮಾಡಿದ್ರ ಒಂದೇ ದಿನದಲ್ಲಿ ಕಟ್ಟುವಂತಹ ಶಸಕ್ತ ನಾಯಕರು ಇದ್ದಾರೆ. ಆದರೆ ನೀವು ಮತದಾನಕ್ಕಾಗಿ ಅಂಬೇಡ್ಕರ್ ಮೂರ್ತಿ ಮಾಡಬೇಡಿ, ಅಂಬೇಡ್ಕರ್ ಈ ದೇಶಕ್ಕಾಗಿ, ಜನಾಂಗಕ್ಕಾಗಿ, ಜಗತ್ತಿಗಾಗಿ ಮಾನವೀಯ ಸಿದ್ಧಾಂತವನ್ನ ಮೆರೆಯಿಸುವುದಕ್ಕಾಗಿ ಶ್ರಮ ಪಟ್ಟವರು. ಮತದಾನದ ಆಸೆ ಬಿಟ್ಟು,ಅಂಬೇಡ್ಕರ್ ಮೂರ್ತಿ ಮಾಡ್ರಿ ಅದಕ್ಕ ಸರಕಾರ ಅಷ್ಟೇ ಅಲ್ಲಾ, ನಾವು ಬಿಜೆಪಿ ನಾಯಕರು 50 ಲಕ್ಷ ರೂಪಾಯಿ ಕೊಡುತ್ತೆವೆ ಎಂದು ಹೇಳಿದರು. ಪ್ರತಿ ಚುನಾವಣೆ ಬಂದಾಗ ಅಂಬೇಡ್ಕರ್ ಮೂರ್ತಿ ಮಾಡ್ತಿನಿ, ರಾಣಿ ಚನ್ನಮ್ಮ ಮೂರ್ತಿ ಮಾಡ್ತಿನಿ ಅಂತಾ ಹೇಳಿ. ಇಡೀ ಕಾಂಗ್ರೆಸ್ ಜನ ನೀವು ತಾಲ್ಲೂಕಿನಿಂದ ರಾಜ್ಯದವರೆಗೂ ಗುಂಡಾಗಿರಿ ಮಾಡುತ್ತಿರಿ ಅಂದರೆ ಸೋಲು ನಿಮಗ ಖಚಿತ ಎಂದು ಹೇಳಿದರು. ನೀವು ಯಾರೋ ಅಕ್ಕಿ ಒಯ್ಯುತ್ತಾರೆ ಅಂತಾ ಆರೋಪ ಮಾಡುತ್ತಿರಿ. ನಿಮ್ಮ ಸರಕಾರವಿದ್ದಾಗ ಎಷ್ಟು ರಸ್ತೆಗಳ ಕಾಮಗಾರಿ ಮುಗಿಯದೇ ರೊಕ್ಕ ಎತ್ತಿರಿ, ನಿನ್ನೆ ತಾನೇ ಪ್ಲಡ್ ಪರಿಹಾರಕ್ಕಾಗಿ ಬಂದ 5 ಕೋಟಿ ರೂಪಾಯಿ ಯಾವ ಮೂಲದಾಗ ಎತ್ತಿರಿ, ನಿಮ್ಮ ತುಡಗ ನೀವು ಮುಚ್ಚಿಕೊಳ್ಳುವ ಸಲುವಾಗಿ ಮತ್ತೊಬ್ಬರ ಕಡೆ ಬೊಟ್ಟು ಮಾಡುವುದು ಕಾಂಗ್ರೆಸ್ ನಾಯಕರು ಯಾವತ್ತೂ ಮಾಡಬೇಡಿ. ನೀವು ಏನು ಅನ್ನೊದು ಜನರಿಗೆ ಗೊತ್ತಾಗುತ್ತಿದೆ. ನಿಮ್ಮ ಅಂತ್ಯ ಸಮೀಪಿಸುತ್ತಿದೆ. ಸಾವು ಹೇಗೆ ದುರ್ಯೋಧನ ತೊಡೆಯಲ್ಲಿ ಆದ ಅಂತ ಮಹಾಭಾರತದಲ್ಲಿತ್ತು. ಹಾಗೇ ನಾವು ನಿಮ್ಮ ಸಾವು ಕಂಡುಹಿಡಿದಿದ್ದೆವೆ. ಎಷ್ಟು ಹೊತ್ತು ಇದ್ರೂ ನಿಮ್ಮ ತೊಡೆ ಮುರಿದೆ ಮುರಿಯುತ್ತೆವೆ. ಸಾಮನ್ಯ ಜನರ ಮೇಲೆ ದಬ್ಬಾಳಿಕೆಯ ನಿಲ್ಲಿಸಬೇಕು ಎಂದು ಎಚ್ಚರಿಕೆ ಸಂದೇಶ ತಿಳಿಸಿದರು.
ಯುವ ಮೂರ್ಚಾ ಮಂಡಲ ಅಧ್ಯಕ್ಷ ಅನೀಲಗೌಡ ಬಿರಾದಾರ, ಜಿಲ್ಲಾ ಮುಖಂಡ ಅನೀಲ ಜಮಾದಾರ, ಮಲ್ಲಿಕಾರ್ಜುನ ಕಿವಡೆ, ಸಿದ್ದಲಿಂಗ ಹಂಜಗಿ, ರವಿ ವಗ್ಗೆ, ಪುರಸಭೆ ಸದಸ್ಯ ದೇವೆಂದ್ರ ಕುಂಬಾರ, ವಿಜು ಮೂರಮನ, ಪಿಂಟು ರಾಠೋಡ, ಸಂಜು ದಶವಂತ, ಮಲ್ಲಿಕಾರ್ಜುನ ವಾಲಿಕಾರ, ರಮೇಶ ಧರೆನವರ ಅನೇಕ ಯುವಕರು ಉಪಸ್ಥಿತರು.