ಇಂಡಿ : ಕಾಂಗ್ರೆಸ್ ಪಕ್ಷದ ನೀತಿ ಖಂಡಿಸಿ ಜನಜಾಗೃತಿ ಪೂರ್ವಭಾವಿ ಸಭೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆಯಿತು. ಇನ್ನು ಸಭೆಯಲ್ಲಿ ಬೆಳಗಾವಿ ವಿಭಾಗೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಮಾತಾನಾಡಿ, ವಿಧಾನಸಭೆ ಅಧಿವೇಶನವನ್ನು ಕಾಂಗ್ರೆಸ್ ನವರು ತಮ್ಮ ಸ್ವಾರ್ಥಕ್ಕಾಗಿ ಬಲಿ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ವೈಚಾರಿಕ ಹಾಗೂ ಬೌದ್ಧಿಕ ದಿವಾಳಿತನವನ್ನು ವಿಧಾನಸಭೆ ಕಲಾಪಗಳನ್ನು ಹಾಳುಗೆಡುವುದರ ಮೂಲಕ ಸಂಚನ್ನು ಬಹಿರಂಗಗೊಳಿಸಿದೆ. ಇನ್ನೂ ಹಿಜಾಬ್ ಮತ್ತು ಸಮವಸ್ತ್ರ ವಿಷಯದಲ್ಲಿ ಕಾಂಗ್ರೆಸ್ಸಿನ ಗೊಂದಲ ನಿಲುವಿನಿಂದ ಆಗಿರುವ ಹಾನಿ ಸರಿಪಡಿಸಿಕೊಳ್ಳಬೇಕು. ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸ್ವಾರ್ಥ ಹುನ್ನಾರಕ್ಕಾಗಿ ರಾಜ್ಯದ ಮಹತ್ವದ ಅಧಿವೇಶನವನ್ನು ವ್ಯರ್ಥ ಮಾಡಿದೆ ಎಂದರು.
ಈ ಸಭೆಯಲ್ಲಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಮಂಡಲ ಉಸ್ತುವಾರಿ ಚಿದಾನಂದ ಚಲವಾದಿ, ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದರ್, ಓಬಿಸಿ ಮೋರ್ಚಾ ರಾಜ್ಯ ಸದಸ್ಯ ಶಿಲವಂತ ಉಮರಾಣಿ, ಬಿಜೆಪಿ ಮುಖಂಡ, ಮುತ್ತು ದೇಸಾಯಿ, ಸಿದ್ದಲಿಂಗ ಹಂಜಗಿ, ಪ್ರ.ಶಿಕ್ಷಣ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಹನುಮಂತ ರಾಯಗೌಡ ಪಾಟೀಲ್, ಮುಖಂಡ ಶ್ರೀಶೈಲಗೌಡ ಬಿರಾದರ್, ಪ್ರಧಾನ ಕಾರ್ಯದರ್ಶಿ ಎಲ್ಲಪ್ಪ ಹದರಿ, ಇಂಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮು ನಿಂಬರಗಿಮಠ ಹಾಗೂ ರಾಜ್ಯದ ಜಿಲ್ಲೆಯ ಮಂಡಲದ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು, ಬಿಜೆಪಿ ಮಾಧ್ಯಮ ಪ್ರತಿನಿಧಿ ರಾಜಶೇಖರ್ ಯರಗಲ್ ಭಾಗವಹಿಸಿದ್ದರು.