ಬಂಜಾರ ಸಮಾಜಕ್ಕೆ ಕಾಂಗ್ರೆಸ್ ಅನ್ಯಾಯ ಮಾಡಿದೆ..!
ಬಂಜಾರ ಸಮಾಜ ಬಿಜೆಪಿಗೆ ಗೆಲ್ಲುಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಇಂಡಿ : ಜಿಲ್ಲೆಯಲ್ಲಿ ಬಂಜಾರ ಸಮುದಾಯ ನೂರಕ್ಕೆ ನೂರರಷ್ಟು ಬಿಜೆಪಿಗೆ ಬೆಂಬಲಿಸಿ, ಗೆಲುಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಬಂಜಾರ ಸಮುದಾಯದ ಮುಖಂಡ ಹಾಗೂ ಜಿಲ್ಲಾ ಪ್ರಕೋಷ್ಟ ಸಹ ಸಂಚಾಲಕ ಭೀಮಸಿಂಗ್ ರಾಠೋಡ ಹೇಳಿದರು.
ಭಾನುವಾರ ಪಟ್ಟಣದ ಖಾಸಗಿ ಹೋಟೆಲನಲ್ಲಿ ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಂಜಾರ ಸಮುದಾಯದ ಮೇಲೆ ಅತ್ಯಂತ ಕಾಳಜಿ ಹೊಂದಿದ್ದರುವ ಬಗ್ಗೆ ಕಾಂಗ್ರೆಸ್ ಪಕ್ಷ ವ್ಯಕ್ತ ಪಡಿಸುತ್ತದೆ. ಆದರೆ ರಾಜ್ಯದ 5 ಮೀಸಲು ಕ್ಷೇತ್ರದಲ್ಲಿ ಬಂಜಾರ ಸಮುದಾಯಕ್ಕೆ ಒಂದು ಕ್ಷೇತ್ರದಲ್ಲಿಯೂ ಅವಕಾಶ ನೀಡದೆ ಯಿರುವ ಅವರ ಕಾಳಜಿ ಅರ್ಥವಾಗುತ್ತದೆ. ಅದಲ್ಲದೇ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಏಕೈಕ ಶಾಸಕ ಹಾಗೂ ಉಪಸಭಾಪತಿ ರುದ್ರಪ್ಪ ಲಮಾಣಿ ಸಚಿವ ಸ್ಥಾನ ನೀಡಬೇಕಾಗಿತ್ತು. ಆದರೆ ಮಾಡಿದ್ದೇನು ಪ್ರಶ್ನೆ ಮಾಡಿದರು. ಇನ್ನೂ ಸಂಸದರ ಬಗ್ಗೆ
ಸುಖಾ ಸುಮ್ನೆ ಸುಳ್ಳು ಆರೋಪ ಮಾಡುವುದು, ಅಪಪ್ರಚಾರ ಮಾಡುವ ಕಾರ್ಯ ಕೈ ಬಿಡಬೇಕು. ಬಂಜಾರ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದಿಂದ ಅನ್ಯಾಯವಾಗಿದೆ. ವಿನಃ ಬಿಜೆಪಿ ಪಕ್ಷದಿಂದ ಇಲ್ಲಾ..! ಆದರೆ ಬಿಜೆಪಿ ಪಕ್ಷ ಎರಡು ಶಾಸಕ ಸ್ಥಾನಕ್ಕೆ ಟಿಕೆಟ್ ನೀಡಿದ್ದಲ್ಲದೆ ಕಲ್ಬುರ್ಗಿ ಲೋಕಸಭಾ ಕ್ಷೇತ್ರಕ್ಕೆ ಬಂಜಾರ ಸಮುದಾಯಕ್ಕೆ ಟಿಕೆಟ್ ಕೊಡುವ ಮೂಲಕ ಅವಕಾಶ ನೀಡಿದೆ ಎಂದು ಹೇಳಿದರು. ಬೊಮ್ಮಾಯಿ ಸರಕಾರ ನಿಗಮ ಮಂಡಳಿ ಮಾಡಿದ್ದು, ಸಮುದಾಯದ ಜನರಿಗೆ ಹಕ್ಕು ಪತ್ರ ನೀಡಿದ್ದು, ಬಿಜೆಪಿ ಕಾರ್ಯ ಶ್ಲಾಘನೀಯ. ಏನೆ ಇದ್ದರೂ ದೇಶದ ಹಿತದೃಷ್ಟಿಯಿಂದ ನರೇಂದ್ರ ಮೋದಿಜಿ ಅವರಿಗೆ ಮತ ನೀಡುವುದು ಅತ್ಯಾವಶ್ಯಕವಾಗಿದೆ. ಹಾಗಾಗಿ ನಾಡಿನ ಜನರು ಹಾಗೂ ಬಂಜಾರ ಸಮುದಾಯದ ಜನರು ನೂರಕ್ಕೆ ನೂರರಷ್ಟು ಬಿಜೆಪಿಗೆ ಬೆಂಬಲಿಸಿ ಮತದಾನ ನೀಡಿ ಮೋದಿಜಿಗೆ ಮತ್ತೊಮ್ಮೆ ಅವಕಾಶ ನೀಡುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸಿ ಮೊರ್ಚಾ ಅಧ್ಯಕ್ಷ ಗೋವಿಂದ ರಾಠೋಡ,ಸೀನು ಚವ್ಹಾಣ, ಕಾಸಿರಾಮ ರಾಠೋಡ, ವಿಜಯ ರಾಠೋಡ, ಗಿರೀಶ್ ರಾಠೋಡ, ಜಯರಾಮ ರಾಠೋಡ, ಬಾಬು ರಾಠೋಡ ಇನ್ನೂ ಅನೇಕರು ಉಪಸ್ಥಿತರಿದ್ದರು.