ಇಂಡಿ : ಇಂಡಿಯಲ್ಲಿ ನಿಂಬೆ ರಾಜಕಾರಣ ನಡೆಯಲ್ಲ ಎಂದು ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಶಿವಯೋಗಪ್ಪ ನೇದಲಗಿ ಶಾಸಕ ಯಶವಂತರಾಯಗೌಡ ಪಾಟೀಲಗೆ ಟಾಂಗ್ ನೀಡಿದರು. ಇಂಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಪಕ್ಷದ ಜಂಟಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿಯಲ್ಲಿ ಕಾಂಗ್ರೆಸ್ ನವರು ಗೂಂಡಾವರ್ತನೆ ಮಾಡುತ್ತಿದ್ದಾರೆ. ಆದ್ರೀಗ್ ಹೊಸ ವರ್ಷ ಆರಂಭವಾಗಿದೆ. ಇನ್ಮೇಲೆ ಇವರ ಆಟ ನಡೆಯೋದಿಲ್ಲ ಎಂದು ವಾಗ್ದಾಳಿ ನಡೆಸಿದರು. ಅಲ್ಲದೇ, ನಿಂಬೆನಾಡಿನಲ್ಲಿ ಕಾಂಗ್ರೆಸ್ ಭದ್ರಕೋಟೆ ಇಲ್ಲದಂತಾಗುತ್ತಿದೆ. ಈಗಾಗಲೇ ಶಾಸಕ ಪಾಟೀಲ್ ಪ್ರತಿಭಟನೆ ಮಾಡುವಂತಹ ಹಂತಕ್ಕೆ ಬಂದಿದ್ದಾರೆ. ಅದಕ್ಕಾಗಿ ಇನ್ಮೇಲೆ ಇಂಡಿಯಲ್ಲಿ ಬಿಜೆಪಿ ಆಡಳಿತ ನಡೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ರವಿಕಾಂತ ಬಗಲಿ, ಸಿದ್ದಲಿಂಗ ಹಂಜಗಿ, ಅನೀಲ ಜಮಾದಾರ, ಹಣಮಂತರಾಯಗೌಡ ಪಾಟೀಲ್, ಶೀಲವಂತ ಉಮರಾಣಿ, ರವಿ ವಗ್ಗೆ, ಯಲ್ಲಪ್ಪ ಹದಿರಿ, ರಾಜಶೇಖರ ಯರಗಲ್ ಉಪಸ್ಥಿತರು.