ತಿಂಥಣಿಯ ಕಾಗಿನೆಲೆ ಗುರುಪೀಠದ ಸಿದ್ಧರಾಮಾನಂದ ಪುರಿ ಮಹಾಸ್ವಾಮಿಗಳು ಅಕಾಲಿಕ ನಿಧನಕ್ಕೆ ಸಂತಾಪ
ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ.
ಮುದ್ದೇಬಿಹಾಳ : ತಿಂಥಣಿಯ ಕಾಗಿನೆಲೆ ಗುರುಪೀಠದ ಸಿದ್ಧರಾಮಾನಂದ ಪುರಿ ಮಹಾಸ್ವಾಮಿಗಳು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಕಾಲಿಕ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ತಾಲೂಕ ಕುರುಬರ ಸಂಘದ ಅಧ್ಯಕ್ಷ ಸಮಾಜ ಸೇವಕ ಮಲ್ಲಿಕಾರ್ಜುನ ಮದರಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಈ ವೇಳೆ ಸಂತಾಪ ನುಡಿಗಳನ್ನು ಆಡಿದ ಮಲ್ಲಿಕಾರ್ಜುನ ಮದರಿ, ಎಸ್ ಎಂ ನೆರಬೆಂಚಿ, ಸುರೇಶ ಹರನಾಳ
ಮೂರು ದಿನಗಳ ಹಿಂದೆ ಹಾಲುಮತ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದ ಶ್ರೀಗಳು ಇಂದು ನಮ್ಮೊಂದಿಗಿಲ್ಲ ಎಂಬ ಸುದ್ದಿ ತ ಭಕ್ತರು ಆಘಾತವಾಗಿದೆ ಇದು ಹಾಲುಮತ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಶ್ರೀಗಳು
ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಾಲುಮತ ಸಮಾಜದ ಸಚಿವರು, ಗಣ್ಯರೊಂದಿಗೆ ಸಿದ್ಧರಾಮಾನಂದ ಪುರಿ ಸ್ವಾಮೀಜಿ ಅತ್ಯಾಪ್ತತೆ ಹೊಂದಿದ್ದರು. ಸಮಾಜ ಯುವ ಸಮೂಹಕ್ಕೆ ದುರಬ್ಯಾಸಗಳಿಂದ ದೂರವಿಡಲು ಕರೆ ನೀಡಿದ್ದ ಶ್ರೀಗಳು ಹಾಲುಮತ ಸಮಾಜ ಒಗ್ಗೂಡಿಸಲು ಶ್ರಮಿಸಿದವರು ಎಂದರು. ಈ ವೇಳೆ ಒಂದು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಲಕೇಂದ್ರಗೌಡ ಪಾಟೀಲ, ವಾಸುದೇವ ಶಾಸ್ತ್ರಿ, ಮುತ್ತಣ್ಣ ಮದರಿ, ರವಿ ಜಗಲಿ, ಬಿ ಜಿ ಬಿರಾದಾರ, ಸಂಗಣ್ಣ ಮೇಲಿನಮನಿ, ಸಂತೋಷ ನಾಯ್ಕೋಡಿ, ಪರಶುರಾಮ ನಾಗರಬೆಟ್ಟ, ಸುರೇಶ ಕಲಾಲ,ಕಿರಣ್ ಪಾಟೀಲ,ಬಿ.ಎಸ್ ಮೇಟಿ,ಎಂ.ಸಿ ಕಬಾಡೆ ಸೇರಿದಂತೆ ಸಮಾಜದ ಗಣ್ಯರು ಪಟ್ಟಣದ ನಾಗರಿಕರು ಶ್ರೀಗಳ ಶ್ರದ್ಧಾಂಜಲಿ ಭಾಗವಹಿಸಿದ್ದರು