ರಾಯಚೂರು: ರಾಯಚೂರು, ತಾಲೂಕಿನ ಯಾಪಲದಿನ್ನಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವಡ್ಡೆ ಪಲ್ಲಿ ಗ್ರಾಮದಲ್ಲಿ ಕಲ್ಲುಗಣಿಗಾರಿಕೆ ಸಂಬಂಧಿಸಿದಂತೆ ಸ್ಥಳ ತನಿಖೆ ಕೈಗೊಂಡು ವಾಸ್ತು ಸ್ಥಿತಿಯ ಸ್ಪಷ್ಟ ವರದಿ ನೀಡಲು ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರ ಆದೇಶವನ್ನು ನೀಡಿದ್ದರು. ಆದರೆ, ಹಿರಿಯ ಭೂ ವಿಜ್ಞಾನ ಗಣಿ ಮತ್ತು ಭೂ ವಿಜ್ಞಾನಿ ಇಲಾಖೆ ಅಧಿಕಾರಿ ವಿಶ್ವನಾಥ್ ಅವರು ಆದೇಶವನ್ನು ಉಲ್ಲಂಘಿಸಿರುವ ಹಿನ್ನಲೆ ಇವರ ವಿರುದ್ಧ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಐ. ಪಿ.ಸಿ ಸೆಕ್ಷನ್ ೧೬೬ ಕಾಯ್ದೆಯಡಿ ದೂರನ್ನು ದಾಖಲಿಸುತ್ತವೆ ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಎಸ್.ನರಸಿಂಹಲು ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಯಚೂರು ತಾಲೂಕಿನ ಯಾಪಲದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಡ್ಡೆಪಲ್ಲಿ ಗ್ರಾಮದಲ್ಲಿ ಕಲ್ಲುಗಣಿಗಾರಿಕೆ ಮಾಡಲಾಗುತ್ತಿದೆ. ಕಲ್ಲುಗಣಿ ಸ್ಫೋಟಕ ಅಕ್ಕ ಪಕ್ಕದ ವಾಸವಿರುವ ಆಶ್ರಯ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ.
ಫಾರಮ್ ನಂ ೩ ಹಾಗೂ ರೂಲ್ ನಂ . ೩( ೨ ) ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಜಿಲ್ಲಾ ಸ್ಟೋನ್ ಕ್ರಷರ್ ರವರು ಕೇವಲ ಸ್ಟೋನ್ ಕ್ರಷ್ ( ಕಲ್ಲು ಪುಡಿ ) ಮಾಡಿ ಎಂ.ಸ್ಯಾಂಡ್ಗೆ ಮಾತ್ರ ಪರವಾನಿಗೆ ನೀಡಲಾಗಿದೆ. ಆದರೆ, ಸ್ಟೋನ್ ಬ್ಲಾಸ್ಟಿಂಗ್ ಮಾಡಿ ಜಿಪ್ , ೨೦ ಎಂ ಎಂ.೪೦ ಎಂ.ಎಂ. ಹಾಗೂ ಜಲ್ಲಿ ಕಂಕರ್ ಮಾಡಿ ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ, ಕಾನೂನು ಬಾಹಿರವಾಗಿ ಮಾಡಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದರು.
ಜಿಲ್ಲಾಧ್ಯಕ್ಷ ಮಾನಪ್ಪ ಮೇಸ್ತ್ರಿ ಮಾತನಾಡಿ, ಹಿರಿಯ ಭೂ ವಿಜ್ಞಾನ ಗಣಿ ಮತ್ತು ಭೂ ವಿಜ್ಞಾನಿ ಇಲಾಖೆ ಅಧಿಕಾರಿ ವಿಶ್ವನಾಥ್ ಅವರು ವಿರುದ್ದ ಜ.೨೧ ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗಣಿ ಮತ್ತು ಭೂ ವಿಜ್ಞಾನಿ ಸಚಿವರು ಧರಣಿ ಸ್ಥಳಕ್ಕೆ ಬಂದು ಮನವಿಯನ್ನು ಸ್ವೀಕರಿಸಬೇಕು ಹಾಗೂ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಂದರ್ಭದಲ್ಲಿ ರಂಜಿತ್ ದಂಡೋರ, ಈರೇಶ್ ಗುಡ್ಲಾರ್ ಇದ್ದರು.



















