ಸಮುದಾಯ ಆರೋಗ್ಯ ತಪಾಸಣಾ ಶಿಬಿರ
ಹನೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಚಾಮರಾಜನಗರ ಜಿಲ್ಲೆ ಸ್ನೇಹಜ್ಯೋತಿ ಮಹಿಳಾ ಸಂಸ್ಥೆ (ರಿ.), ಚಾಮರಾಜನಗರ ಹಾಗೂ ಗ್ರಾಮ ಆರೋಗ್ಯ ಕಾರ್ಯಕ್ರಮದ ಸಹಯೋಗದಲ್ಲಿ ಸಮುದಾಯ ಆಧಾರಿತ ಆರೋಗ್ಯ ತಪಾಸಣಾ ಶಿಬಿರವನ್ನು ಹನೂರು ತಾಲ್ಲೂಕಿನ ಸಂತೇಬೀದಿಯ ಹತ್ತಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರದ ಉದ್ಘಾಟನೆಯನ್ನು ತಾಲೂಕು ಆರೋಗ್ಯ ಅಧಿಕಾರಿಗಳಾದಂತಹ ಶ್ರೀಯುತ ಪ್ರಕಾಶ್.ಎನ್ ನಡೆಸಿದರು ನಂತರ ಈ ಶಿಬಿರವನ್ನು ಕುರಿತು ಮಾತನಾಡಿ ಉತ್ತಮ ಆರೋಗ್ಯ ಸಮಾಜ ನಿರ್ಮಾಣವಾಗಬೇಕು ಹಾಗೂ ಹೆಚ್‌ಐವಿ ಸಂಖ್ಯೆಯನ್ನು ಶೂನ್ಯಕ್ಕೆ ತರಬೇಕು ಮತ್ತು ಜನಸಾಮಾನ್ಯರು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಹಾಗಾಗಿ ಎಲ್ಲರೂ ಸಹಕರಿಸಿದರೆ ಮಾತ್ರ ಸಾಧ್ಯ ಎಂದರು. ಶಿಬಿರದಲ್ಲಿ ಒಟ್ಟು 163
ಸಮುದಾಯದವರಿಗೆ ಹಾಗೂ ಜನಸಾಮಾನ್ಯರಿಗೆ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆಯನ್ನು ಮಾಡಲಾಯಿತು 163 ಜನರಿಗೆ ಹೆಚ್‌ಐವಿ ಮತ್ತು ಸಿಫಿಲಿಸ್ ಪರೀಕ್ಷೆಯನ್ನು ಮಾಡಲಾಯಿತು. 9 ಜನರಿಗೆ ಕಫ ಪರೀಕ್ಷೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸ್ನೇಹ ಜ್ಯೋತಿ ಮಹಿಳಾ ಸಂಸ್ಥೆಯ ಯೋಜನಾ ವ್ಯವಸ್ಥಾಪಕರಾದಂತಹ ಶ್ರೀಯುತ ಚಂದ್ರಶೇಖರ್ ಹೆಚ್ ಪಾಟೀಲ್ , ಪ್ರಾಥಮಿಕ ಆರೋಗ್ಯ ಅಧಿಕಾರಿ ಶಾಂತಮ್ಮ, ಗ್ರಾಮ ಆರೋಗ್ಯ ಕಾರ್ಯಕ್ರಮದ ತಾಲೂಕು ಸಂಯೋಜಕರಾದಂತಹ ಶ್ರೀಯುತ ಸಂತೋಷ್, ಸಿದ್ದರಾಜು ಬಿ, ವೃಷಬೇಂದ್ರ , ರಶ್ಮಿ & ನವೀನ್ ಹನೂರು ತಾಲ್ಲೂಕಿನ ಆಶಾ ಕಾರ್ಯಕರ್ತೆಯ ಶ್ರೀಮತಿ ಮಂಜುಳ & ಜ್ಯೋತಿ, ಸ್ನೇಹ ಜ್ಯೋತಿ ಮಹಿಳಾ ಸಂಸ್ಥೆಯ ಆಪ್ತಸಮಾಲೋಚಕಿ ಅರ್ಪಿತ, ವಿಮಲಾ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದರು.