ಶರಣು ಸಜ್ಜನಗೆ ವಾಣಿಜ್ಯ ರತ್ನ ಪ್ರಶಸ್ತಿ..!
ಮುದ್ದೇಬಿಹಾಳ: ಪಟ್ಟಣದ ಹತ್ತಿರ ಬರುವ ಕುಂಟೋಜಿ ರಸ್ತೆ ಪಕ್ಕದಲ್ಲಿರುವ ಸಾಯಿನಾಥ ದಾಲ್ ಇಂಡಸ್ಟ್ರೀಸ್ ಮಾಲೀಕ ಶರಣು ಸಜ್ಜನ ಅವರಿಗೆ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು 96ನೇ ಸಂಸ್ಥಾಪಕರ ದಿನಾಚರಣೆಯ ಕಾರ್ಯಕ್ರಮ ನಿಮಿತ್ತ ಕೊಡಮಾಡುವ 2024ನೇ ಸಾಲಿನ ವಾಣಿಜ್ಯ ರತ್ನ ಪ್ರಶಸ್ತಿ ದೊರಕಿದೆ. ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್‌ನಲ್ಲಿ ಶನಿವಾರ ಆ.10ರಂದು ಸಂಜೆ 5ಕ್ಕೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.