ಅಫಜಲಪುರ : ತಾಲೂಕಿನ ಗೊಬ್ಬರದ ಅಂಗಡಿಗಳ ಮಾಲೀಕರು ರೈತರಿಂದ ಒಂದು ಚೀಲ ಡಿಎಪಿ ಗೊಬ್ಬರದ ಬೆಲೆಗಿಂತ 150 ರೂಪಾಯಿ ಹೆಚ್ಚುವರಿ ಬೆಲೆ ತೆಗೆದುಕೊಂಡು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅಲ್ಲದೆ ರೈತನಿಗೆ ಅವಶ್ಯಕತೆ ಇಲ್ಲದ ಕೆಲವು ಗೊಬ್ಬರಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕೆಂದು ಹೇಳುತ್ತಾರೆ. ರೈತರು ಖರೀದಿ ಮಾಡಿದ ಗೊಬ್ಬರಕ್ಕೆ ರಸೀದಿ ಕೊಡದೆ ಡುಬ್ಲಿಕೇಟ್ ರಸಿದಿ ಕೊಟ್ಟು ರೈತರಗೆ ಮೋಸ ಮಾಡುತ್ತಿದ್ದಾರೆ. ರೈತರು ರಸೀದಿ ಕೊಡಿ ಎಂದು ಒತ್ತಾಯ ಮಾಡಿದರೆ ಆ ರೈತನಿಗೆ ಗೊಬ್ಬರ ಇಲ್ಲ ಎಂದು ಹೇಳಿ ಗೊಬ್ಬರ ಕೊಡದೆ ಕಳಿಸುತ್ತಾರೆ.
ಈ ವಿಚಾರವನ್ನು ಹಲವಾರು ಬಾರಿ ಲಿಖಿತ ರೂಪದಲ್ಲಿ ಕೃಷಿ ಅಧಿಕಾರಿಗಳಿಗೆ ಮನವಿ ಕೊಟ್ಟರು ತಾಲೂಕ ಕೃಷಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇನ್ನು ರೈತರು ಕೃಷಿ ಅಧಿಕಾರಿಗಳನ್ನು ಭೇಟಿಯಾಗಿ ನಡೆಯುತ್ತಿರುವ ಅನ್ಯಾಯ ಬಗ್ಗೆ ವಿವರಿಸಿದಾಗ ಅಧಿಕಾರಿಗಳು ಕೂಡಲೇ ಗೊಬ್ಬರದ ಅಂಗಡಿ ಮಾಲೀಕರ ಸಭೆ ಕರೆದು ರೈತರಿಂದ ಸುಲಿಗೆ ಮಾಡುತ್ತಿರುವ ಅಂಗಡಿಗಳನ್ನು ಪತ್ತೆ ಹಚ್ಚಿ, ಅವರ ಪರವಾಗಿ ರದ್ದುಪಡಿಸುವುದಾಗಿ ಭರವಸೆ ನೀಡಿದ್ದಾರೆ. ಕೂಡಲೇ ರೈತರಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ರೈತ ಮುಖಂಡರಾದ ರಮೇಶ್ ಎಸ್ ಹೂಗಾರ್ ಹೇಳಿದರು.
ವರದಿ ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.