ಅಫಜಲಪುರ: ಒಂದು ದೇಶ ಗುಣಮಟ್ಟದ ನಾಯಕತ್ವ, ದೂರದೃಷ್ಟಿಯ ಸರ್ಕಾರ, ಜನಪರ ನೀತಿಗಳನ್ನು ಜಾರಿಗೆ ಬರುವಂತೆ ಮಾಡಲು ಮತದಾನ ಬಹಳ ಮಹತ್ವದ ಪಾತ್ರ ವಹಿಸುತ್ತದೆ ಹೀಗಾಗಿ ವಿದ್ಯಾರ್ಥಿಗಳು ಮತದಾನದ ಮಹತ್ವ ತಿಳಿಯಬೇಕು. ಈ ನಿಟ್ಟಿನಲ್ಲಿ ಕಾಲೇಜು ಸಂಸತ್ತು ಚುನಾವಣೆ ಮಾಡುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣ ಗೆಯಾಗಿದೆ ಎಂದು ಉದ್ಯಮಿ ಸಂತೋಷ ದಾಮಾ ಹೇಳಿದರು.
ಅಫಜಲಪುರ ಪಟ್ಟಣದ ಎಪಿಜೆ ಅಬ್ದುಲ್ ಕಲಾಂ ಕಲಾ ಮತ್ತು ವಾಣಜ್ಯ ಪಿ ಯು ಕಾಲೇಜಿನಲ್ಲಿ ನಡೆದ ಸಂಸತ್ತು ಚುನಾವಣೆಯಲ್ಲಿ ಮತದಾನಮಾಡಿ ಮಾತನಾಡಿದ ಅವರು, ನಮ್ಮ ದೇಶದ ಭವಿಷ್ಯವೇ ಯುವಕರಾಗಿದ್ದಾರೆ. ಅದರಲ್ಲೂ ವಿದ್ಯಾವಂತ ಯುವ ಜನಾಂಗ ನಮ್ಮ ದೇಶದ ಭವಿಷ್ಯದ ಆಸ್ತಿಯಾಗಿದ್ದಾರೆ. ಹೀಗಾಗಿ ನಿಮಗೆಲ್ಲ ಮತದಾನದ ಮಹತ್ವ ತಿಳಿಯಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ಇಂತಹ ಮತದಾನದ ಪ್ರಕ್ರೀಯೆ ಮಾಡುವ ಮೂಲಕ ಮತದಾನದ ಮಹತ್ವ ತಿಳಿಸಿ ಕೊಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಹರ್ಷವರ್ಧನ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಸಂಗಣ್ಣ ಸಿಂಗೆ ಹಾಗೂ ಶಿಕ್ಷಕ ಮಲ್ಲಿನಾಥ ಟೊಣ್ಣೆ ಮಾತನಾಡಿ ಅಫಜಲಪುರ ಪಟ್ಟಣದಲ್ಲಿ ಎಪಿಜೆ ಅಬ್ದುಲ್ ಕಲಾಂ ಪಿಯು ಕಾಲೇಜು ಬಹು ಶಿಸ್ತಿನಿಂದ ಕೂಡಿರುವ ಕಾಲೇಜಾಗಿದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಮೊದಲ ಆಧ್ಯತೆ ನೀಡುತ್ತಿದ್ದಾರೆ ಹೀಗಾಗಿ ಕಾಲೇಜಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯದಿಂದ ಬದುಕು ಕಟ್ಟಿಕ್ಕೊಳ್ಳುತ್ತಾನೆ. ಕೆಲ ದಿನಗಳ ಹಿಂದೆ ಆರಂಭವಾಗಿರುವ ಕಾಲೇಜು ತುಂಬಾ ಸಾಧನೆ ಮಾಡಿ ಹೆಸರಾಗಿದೆ. ಈ ಸಂಸ್ಥೆಯು ಭವಿಷ್ಯದಲ್ಲಿ ಇನ್ನೂ ಹೆಚ್ಚು ಬೆಳೆಯಲಿ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಶಿವಾನಂದ ಚಿಂಚೋಳಿ, ಸಿಬ್ಬಂದಿಗ ಚಂದ್ರಕಾಂತ ನಾವಿ, ಚಂದ್ರಕಾಂತ ಸುತಗುಡಿ, ಭೀಮಣ್ಣಗೌಡ ಗಣಯಾರ, ಮಲ್ಲಿನಾಥ ಮೇತ್ರಿ, ಅಂಜುಟಗಿ ಸೇರಿದಂತೆ ಅನೇಕರು ಇದ್ದರು.