- ಶಿರಗೂರ ಇನಾಂ ಗ್ರಾಮದಲ್ಲಿ ವಿನೂತನ ಪ್ರತಿಭಟನೆ..
- ಜಾತಿ ಪ್ರಮಾಣ ಪತ್ರ ಹರಿದು ಹಾಕಿ ಆಕ್ರೋಶ..
ಇಂಡಿ : ಸರ್ಕಾರದ ಆದೇಶದಂತೆ ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡದೇ ಪ್ರವರ್ಗ-1ರಡಿ ನೀಡಿದ ಜಾತಿ ಪ್ರಮಾಣ ಪತ್ರ ಹರಿದು ಹಾಕಿ ತಳವಾರ ಸಮುದಾಯದ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಿದರು. ಇಂಡಿ ತಾಲೂಕಿನ ಶಿರಗೂರ ಇನಾಂ ಗ್ರಾಮದಲ್ಲಿ ಮನೆ ಬಾಗಿಲಿಗೆ ಕಂದಾಯ ದಾಖಲೆ ಕಾರ್ಯಕ್ರಮದಡಿ ನ್ಯಾಯಯುತವಾಗಿ ಸಿಗಬೇಕಾದ ಎಸ್ಟಿ ಪ್ರಮಾಣ ಪತ್ರದ ಬದಲಾಗಿ ಪ್ರವರ್ಗ-1ರಡಿ ಜಾತಿ ಪ್ರಮಾಣ ಪತ್ರ ನೀಡಲಾಗಿದೆ. ಅಧಿಕಾರಿಗಳ ಈ ದುರುದ್ಧೇಶ ಖಂಡಿಸಿ ಯುವಕರು ಪ್ರತಿಭಟನೆ ನಡೆಸಿದರು.
ಮನೆ ಬಾಗಿಲಿಗೆ ಬಂದ ಜಾತಿ ಪ್ರಮಾಣ ಪತ್ರ ಹರಿದು ಹಾಕಿ ಕೂಡಲೇ ಎಸ್ಟಿ ಪ್ರಮಾಣ ಪತ್ರ ನೀಡಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಗ್ರಾಮ ಪಂಚಾಯತ್ ಮಾಜಿ ಸದಸ್ಯ ಭೀಮಾಶಂಕರ ನಾಯಕೋಡಿ ಮಾತನಾಡಿದ ಅವರು, ಕಳೆದೊಂದು ವರ್ಷದಿಂದ ಎಸ್ಟಿ ಜಾತಿ ಪ್ರಮಾಣ ಪತ್ರಕ್ಕಾಗಿ ಕಚೇರಿಗೆ ಅಲೆದಾಡುತ್ತಿದ್ದೇವೆ. ಸರ್ಕಾರ ಕಾಟಾಚಾರಕ್ಕೆ ಸುತ್ತೋಲೆ ಹೊರಡಿಸಿ ಸುಮ್ಮನಾಗುತ್ತಿದೆ. ಅಧಿಕಾರಿಗಳು ದುರುದ್ಧೇಶದಿಂದ ಎಸ್ಟಿ ಪ್ರಮಾಣ ಪತ್ರ ನೀಡದೇ ಅನ್ಯಾಯ ಮಾಡುತ್ತಿದ್ದಾರೆ. ಇದರಿಂದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ತೊಂದರೆಗೆ ಸಿಲುಕಿದ್ದೇವೆ. ಹೀಗಾಗಿ ಬಿಜೆಪಿ ಸರ್ಕಾರ ಈ ಕೂಡಲೇ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಎಸ್ಟಿ ಪ್ರಮಾಣ ಪತ್ರ ಒದಗಿಸಬೇಕು. ಇಲ್ಲವಾದಲ್ಲಿ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಮುದಾಯದ ಮುಖಂಡ ಸೀದರಾಯ ನಾಯಕೋಡಿ, ಶ್ರೀಕಾಂತ ನಾಯಕೋಡಿ ಶ್ರೀಸೈಲ ನಾಯಕೋಡಿ ಲಕ್ಷ್ಮಣ ನಾಯಕೋಡಿ ಅಂಬಣ್ಣಾ ನಾಯಕೋಡಿ ಶಾಮರಾಯ ನಾಯಕೋಡಿ ರಮೇಶ್ ನಾಯಕೋಡಿ ಕಾಸೀನಾಥ ಕೋಳಿ ದುಳಪ್ಪಾ ಕೋಳಿ ಪರಮೆಸುರ ನಾಯಕೋಡಿ ಸಿದ್ದಪ್ಪಾ ನಾಯಕೋಡಿ ಗಂಗಾಧರ ನಾಯಕೋಡಿ ಮತ್ತಿತರರಿದ್ದಾರೆ.