ಶತಮಾನಗಳ ಪರಂಪರೆಯ ಹೊರ್ತಿ ಗ್ರಾಮದ ಶಿವ ದೇವಾಲಯಕ್ಕೆ ಸ್ವಚ್ಚತೆಯ
ಸ್ಪರ್ಶ ನೀಡಿದ ಗಾನಯೋಗಿ ಸಂಘದ ತಂಡಕ್ಕೆ ಅಭಿನಂನೆಗಳು
ವಿಜಯಪುರ : ಜಿಲ್ಲೆಯ ಇಂಡಿ ತಾಲ್ಲೂಕಿನ ಹೊರ್ತಿ ಗ್ರಾಮದಲ್ಲಿರುವ ಕ್ರಿ.ಶ. 11ನೇ ಶತಮಾನದ ಚಾಲುಕ್ಯರ ಕಾಲದ ಅಪರೂಪದ ಪ್ರಾಚೀನ ಶಿವ ದೇವಾಲಯವನ್ನು ಗಾನಯೋಗಿ ಸಂಘದ ಸದಸ್ಯರು, ಪದಾಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಒಗ್ಗಟ್ಟಿನಿಂದ ಸ್ವಚ್ಚಗೊಳಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ.
ಇಂತಹ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಸ್ಮಾರಕಗಳನ್ನು ಸಂರಕ್ಷಿಸುವ ಜವಾಬ್ದಾರಿ ಸರ್ಕಾರದೊಂದಿಗೆ ಸಮಾಜದ ಮೇಲೆಯೂ ಇದೆ. ಗಾನಯೋಗಿ ಸಂಘ ತೋರಿದ ಈ ಕಾರ್ಯ ಇತರ ಸಂಘಟನೆಗಳಿಗೆ ಮಾದರಿಯಾಗಿದೆ.
ಈ ಸೇವಾ ಕಾರ್ಯಕ್ಕೆ ಕೈ ಜೋಡಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.
#ಗಾನಯೋಗಿಸಂಘ
#ಸಚಿವ ಎಮ್ ಬಿ ಪಾಟೀಲ
#Facebook Page


















