ಸ್ವಚ್ಛತೆ ಎನ್ನುವುದು ಕೇವಲ ಪೌರ ಕಾರ್ಮಿಕರ ಕೆಲಸವಲ್ಲ..!
ರಾಯಚೂರು : ಇಂದು ನಗರದ ಲ್ಯಾಂಡ್‌ಫಿಲ್ ಸೈಟ್‌ಗೆ ಭೇಟಿ ನೀಡಿ, ನಗರದಿಂದ ಸಂಗ್ರಹವಾಗುತ್ತಿರುವ ಕಸ ವಿಲೇವಾರಿ, ತ್ಯಾಜ್ಯ ಸಂಗ್ರಹಣೆ, ಅವುಗಳ ವೈಜ್ಞಾನಿಕ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದು, ಘಟಕದ ಕಾರ್ಮಿಕರೊಂದಿಗೆ ಸೌಹಾರ್ದ ಯುತವಾಗಿ ಮಾತುಕತೆ ನಡೆಸಲಾಯಿತು.
ರಾಯಚೂರನ್ನು “ಸ್ವಚ್ಛ ನಗರ– ಹಸಿರು ನಗರ “ ಎಂಬ ಗುರಿ ಸಾಧಿಸಲು ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದು ಅತ್ಯಂತ ಮುಖ್ಯ. ನಗರದ ಸ್ವಚ್ಛತೆಗೆ ಪೌರಕಾರ್ಮಿಕರೇ ಸ್ವಚ್ಛ ಯೋಧರು. ಅವರ ಪರಿಶ್ರಮವನ್ನು ಶ್ಲಾಘಿಸಲಾಯಿತು.
ಸ್ವಚ್ಛತೆ ಎನ್ನುವುದು ಕೇವಲ ಪೌರ ಕಾರ್ಮಿಕರ ಕೆಲಸವಲ್ಲ. ನಾಗರಿಕರ ಗುರುತರ ಜವಾಬ್ದಾರಿ ಕೂಡ. ಎರಡು ಕೈ ಸೇರಿದರೆ ಚಪ್ಪಾಳೆ ಆಗುವಂತೆ, ಸುಂದರ ರಾಯಚೂರಾಗಿಸಲು ಎಲ್ಲರ ಸಹಕಾರ ಅಗತ್ಯ.
ಈ ಸಂದರ್ಭದಲ್ಲಿ ಶ್ರೀ ಮೊಹಮ್ಮದ್ ಶಾಲಂ, ಶ್ರೀ ಶಾಂತಪ್ಪ, ಶ್ರೀ ಜಯಣ್ಣ, ಶ್ರೀ ಮಾಡಗೇರಿ ನರಸಿಂಹಲು, ಶ್ರೀ ರಮೇಶ್, ಹರಿಬಾಬು, ಶ್ರೀ ತಿಮ್ಮಪ್ಪ, ಶ್ರೀ ಶಾಮ್ ಸುಂದರ್, ಶ್ರೀ ನರಸರೆಡ್ಡಿ ಹಾಗೂ ಇನ್ನಿತರರು ಹಾಜರಿದ್ದರು.
#Raichur #RaichurCity #cleanRaichurGreenRaichur


















