ಸ್ವಚ್ಚ ಇಂಡಿ, ಸ್ವಚ್ಚ ಇಂಡಿಯಾ ಅಭಿಯಾನ. ಇಂಡಿಯಲ್ಲಿ ಪತ್ರಕರ್ತರ ಕಾರ್ಯಕ್ಕೆ ಮೆಚ್ಚುಗೆ..! ಎಸಿ ಗದ್ಯಾಳ ಸಂತಸ..
ಇಂಡಿ : ಸ್ವಚ್ಛ ಇಂಡಿ, ಸ್ವಚ್ಚ ಇಂಡಿಯಾ ಅಭಿಯಾನವನ್ನು ಸ್ವತಂತ್ರ ದಿನಾಚರಣೆ ಮುನ್ನ 10 ದಿನಗಳ ಕಾಲ ಕಾರ್ಯಾಚರಣೆ ಹಮ್ಮಿಕೊಂಡಿದ್ದೆವೆ ಎಂದು ಉಪ ವಿಭಾಗದ ನೂತನ ಅಧಿಕಾರಿ ಅಬೀದ್ ಗದ್ಯಾಳ ತಿಳಿಸಿದರು.
ಪಟ್ಟಣದಲ್ಲಿ ಎಸ್ ಫಾರ್ ಸ್ವಚ್ಚ ಇಂಡಿ ಕಾರ್ಯಕ್ರಮದ ಎರಡನೇ ದಿನದ ಕಾರ್ಯ ಚಟುವಟಿಕೆಯಲ್ಲಿ ಕಾರ್ಯ ನಿರತ್ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ ಸಚ್ಚತೆ ಅಭಿಯಾನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತಾನಾಡಿದರು.
ಸ್ವಯಂ ಪ್ರೇರಿತರಾಗಿ ಪತ್ರಕರ್ತರು ಸ್ವಚ್ಚತೆ ಅಭಿಯಾನದಲ್ಲಿ ಪಾಲ್ಗೊಂಡಿದಕ್ಕೆ ಸಂತಸವಾಗಿದೆ. ಪತ್ರಕರ್ತರು ಸಂವಿಧಾನದ ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಾರೆ. ವಿಶೇಷವಾಗಿ ಮಾನವ ಸಮಾಜದ ಬಗ್ಗೆ ಅಪಾರಕಾಳಜಿ ಹೊಂದಿದ್ದು, ಪತ್ರಕರ್ತರಲ್ಲಿ ದೊಡ್ಡ ಜವಾಬ್ದಾರಿ ಇದೆ. ಸಮಾಜದ ಓರೆಕೊರೆ ತಿದ್ದುವ ಜೊತೆಗೆ ಅಭಿವೃದ್ಧಿ ಪ್ರಗತಿಗೆ ಮಹತ್ವ ಕೊಡಬೇಕು ಎಂದು ಹೇಳಿದರು.
ಇದು ಕೇವಲ 10 ದಿನಗಳ ಕಾಲ ನಡೆಯುವ ಚಟುವಟಿಕೆ ಅಲ್ಲಾ, ನಮ್ಮ ಬದುಕಿನಯೂದ್ದಕ್ಕೂ ನಡೆಯುವ ಕಾರ್ಯ ಚಟುವಟಿಕೆಗಳಲ್ಲಿ ಒಂದಾಗಬೇಕು. ದೈಹಿಕ ಸ್ವಚ್ಚತೆ ಮತ್ತು ಸೌಂದರ್ಯಕ್ಕೆ ಎಷ್ಟು ಒತ್ತು ಕೊಡುತ್ತಿರೊ..! ಅಷ್ಟೇ ಮುಖ್ಯವಾಗಿ ಮನೆ, ಊರು, ಪಟ್ಟಣ ಜೊತೆಗೆ ಸುತ್ತಲೂ ಪರಿಸರ ಸ್ವಚ್ಚತೆಗೆ ಆದ್ಯತೆ ಕೊಡಬೇಕು. ಇನ್ನೂ ಸ್ವಚ್ಚತೆ ಪ್ರತಿನಿತ್ಯದ ಕಾಯಕವಾಗಬೇಕು. ಪ್ರತಿಯೊಬ್ಬನ ಆಂತರಿಕ ಮನಸ್ಸಿನಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮತ್ತು ಬದಲಾವಣೆ ಕಾಣಬೇಕು. ಸ್ವಚ್ಚತೆ ಅನ್ನೊದು ಮನುಷ್ಯ ಒಂದು ದೇಹದ ಭಾಗ, ಒಂದು ಧರ್ಮ, ಅದು ಪ್ರತಿಯೊಬ್ಬನ ಆಂತರಿಕ ಮನಸ್ಸಲ್ಲಿ ಜಾಗೃತೆ ಮೂಡಿಸುವ ಕಾರ್ಯ ಇದು ನಮ್ಮ ಧ್ಯೇಯ ಗುರಿಯಾಗಿದೆ. ಸ್ವಲ್ಪ ಸಮಯದಲ್ಲಿ ಉಪವಿಭಾಗದ ವ್ಯಾಪ್ತಿಯಲ್ಲಿ ಮತ್ತು ಗ್ರಾಮೀಣ ಪ್ರದೇಶಕ್ಕೂ ಸ್ವಚ್ಚತಾ ಅಭಿಯಾನಕ್ಕೆ ಮಹತ್ವ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಇಂಡಿ ಜನರು ಹೃದಯವಂತರು ಸಹಕಾರ ನೀಡುತ್ತಾರೆ ಮತ್ತು ಸ್ವಯಂ ಪ್ರೇರಿತರಾಗಿ ಕಾಯಕ ಮಾಡುತ್ತಾರೆ ಎಂದು ಹೇಳಿದರು.
ಇನ್ನೂ ಇದೇ ಸಂದರ್ಭದಲ್ಲಿ ತಾಲ್ಲೂಕು ಕನಿಪ ಸಂಘದ ಅಧ್ಯಕ್ಷ ಅಬುಶಾಮ ಹವಾಲ್ದಾರ್ ಮಾತಾನಾಡಿದ ಅವರು, ಆರೋಗ್ಯ ಮತ್ತು ನೈರ್ಮಲ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ನೈರ್ಮಲ್ಯ ಇರುವಲ್ಲಿ ಆರೋಗ್ಯ ಇರುತ್ತದೆ. ನೈರ್ಮಲ್ಯದ ಕೊರತೆ ಇದ್ದಲ್ಲಿ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಜನಸಾಮಾನ್ಯರು ಆರೋಗ್ಯವಾಗಿದ್ದಲ್ಲಿ ಮಾತ್ರ ಅವರ ಜೀವನ ಮಟ್ಟ ಉತ್ತಮವಾಗಲು ಸಾಧ್ಯ. ಸಾಮಾನ್ಯವಾಗಿ ಆರೋಗ್ಯದ ಸಮಸ್ಯೆಗಳು ಸ್ವಚ್ಚತೆ ಮತ್ತು ನೈರ್ಮಲ್ಯದ ಕೊರತೆಯಿಂದ ಉಂಟಾಗುತ್ತವೆ. ಜನಸಾಮಾನ್ಯರಲ್ಲಿ ಅರಿವಿನ ಕೊರತೆಯಿಂದಾಗಿ ನೈರ್ಮಲ್ಯ ಕೊರತೆ ಉಂಟಾಗಿ ಅನೇಕ ರೋಗಗಳಿಗೆ ತುತ್ತಾಗಲು ಕಾರಣವಾಗುತ್ತಿದೆ. ಹಾಗಾಗಿ ಸ್ವಚ್ಚತೆ ಅತೀ ಹೆಚ್ಚು ಮಹತ್ವ ಕೊಟ್ಟರೆ, ಆರೋಗ್ಯದ ಶ್ರೀಮಂತಿಕೆ ಸಿಗುತ್ತದೆ ಎಂದು ಹೇಳಿದರು.
ಕಾರ್ಯದರ್ಶಿ ಲಾಲಸಿಂಗ್ ರಾಠೋಡ, ರಾಜಕುಮಾರ ಚಾಬುಕಸವಾರ, ಶಂಕರ್ ಜಮಾದಾರ, ಆನಂದ ಗಣಚಾರಿ, ಬಿರಪ್ಪ ಹೊಸೂರ, ಪ್ರವೀಣ ಮಠ
ಜಹಾಂಗೀರ್ ದೇಸಾಯಿ ಹಾಗೂ ಇನ್ನೂ ಅನೇಕ ಯುವಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.