ಕಾಲುವೆಗಳಲ್ಲಿ ಹೂಳುತ್ತಲು ಅಧಿಕಾರಿಗಳಿಗೆ ಸೂಚನೆ : ಶಾಸಕ ಎಂ ಆರ್ ಮಂಜುನಾಥ್
ಹನೂರು : ಕಾಲುವೆಗಳಲ್ಲಿ ತುಂಬಿದ ಹೂಳು ತೆಗೆಯುವುದು ಹಾಗೂ ಕಾಲುವೆಯ ಸುತ್ತ ಬೆಳೆದಿರುವ ಗಿಡಮರಗಳನ್ನು ಕಟಾವು ಮಾಡಿ ಉಡುತೊರೆ ಹಳ್ಳ ಜಲಾಶಯದ ನೀರು ಹರಿದು ಹೋಗುವ ಪ್ರತಿಯೊಂದು ಕಾಲುವೆಗಳ ಹೂಳು ತೆಗೆಯಿಸಿ ಆ ಭಾಗದ ರೈತರಿಗೆ ಅನುಕೂಲ ಮಾಡಿಕೊಡಿ ಎಂದು ನೀರಾವರಿ ಅಧಿಕಾರಿಗಳಿಗೆ ಶಾಸಕ ಎಮ್ ಆರ್ ಮಂಜುನಾಥ ಸೂಚಿಸಿದರು.
ತಾಲೂಕಿನ ಕೆ ಗುಂಡಾಪುರ ಉಡುತೊರೆ ಜಲಾಶಯದ ನೀರು ಹರಿಯುವ ಕಾಲುವೆಗಳನ್ನು ವೀಕ್ಷಿಸಿ ಮಾತಾನಾಡಿದರು. ಇನ್ನೂ ಕಾತಾಳಿ ಬಸವೇಶ್ವರ ದೇವಸ್ಥಾನ ಹತ್ತಿರ ಇರುವ ಕೆರೆಯನ್ನು ವೀಕ್ಷಣೆ ಮಾಡಿ ಜಲಾಶಯದಿಂದ ನೀರು ಬಿಡುವ ಸಂದರ್ಭದಲ್ಲಿ ಹೆಚ್ಚಾಗಿ ಕೆರೆಯ ನೀರು ತುಂಬಿಕೊಂಡು ಅಕ್ಕ ಪಕ್ಕದಲ್ಲಿರುವ ಜಮೀನುಗಳಗೆ ತುಂಬಿಕೊಳ್ಳುತ್ತದೆ ಎಂದು ಕೆರೆಯ ಪಕ್ಕದ ಜಮೀನು ಮಾಲೀಕರು ಶಾಸಕರಿಗೆ ತಿಳಿಸಿದಾಗ ಕೂಡಲೆ ಶಾಸಕರು ಈ ಕೆರೆಯ ನೀರು ಬೇರೆ ಕಡೆ ಹೋಗುವ ವ್ಯವಸ್ಥೆ ಮಾಡಿ, ಇದರ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಂಜಿನಿಯರ್ ಮಂಜುನಾಥ್ ಕಾಂಚಳ್ಳಿ ಜಡೇಸ್ವಾಮಿ, ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮುತ್ತುರಾಜು, ಹನೂರು ವಿಜಯ್ ಕುಮಾರ್, ಗೋಪಾಲ್ ನಾಯಕ, ಹನೂರು ತಾಲೂಕು ರೈತ ಸಂಘದ ಅಧ್ಯಕ್ಷ ಅಮ್ಜದ್ ಖಾನ್ ಹಾಗೂ ಇನ್ನಿತರರು ಹಾಜರಿದ್ದರು.
ವರದಿ : ಚೇತನ್ ಕುಮಾರ್ ಎಲ್, ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ.