ಲಿಂಗಸೂಗೂರು:ರಾಯಚೂರ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಿದ ಸಂದರ್ಭದಲ್ಲಿ ಹಟ್ಟಿ ಪಟ್ಟಣದ ನಾಗರಿಕರು ಸಂಭ್ರಮಿಸಿದ್ದರು. ಕಾರಣ ಗ್ರಾಮ ಪಂಚಾಯತಿಯಾಗಿದ್ದಾಗ ಯಾವೊಂದು
ಮೂಲಭೂತ ಸಮಸ್ಯೆಗಳು ಬಗೆಹರಿಯದೇ ಜನ್ರು ತೊಂದರೆಗೊಳಗಾಗಿದ್ದರು.ಮುಖ್ಯವಾಗಿ ಕುಡಿಯುವನೀರಿನ ಸಮಸ್ಯೆ ಎದುರಾಗಿ ತಿಂಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವುದರಿಂದ
ಕುಡಿಯುವ ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಯಿತು.
ಇದರಿಂದಾಗಿ ಕುಡಿಯುವ ನೀರಿಗಾಗಿ
ಕಂಪನಿಯ ನೀರನ್ನು ಅವಲಂಬಿಸಬೇಕಾಯಿತು. ಪಟ್ಟಣ ಪಂಚಾಯತಿ ಆದ ನಂತರದಲ್ಲಿ ನೀರಿನ ಸಮಸ್ಯೆ ನೀಗಿಸಬಹುದೆಂಬ ವಿಶ್ವಾಸವನ್ನು ತಾವು ಸುಳ್ಳು ಮಾಡಿದಿರಿ. ಕುಡಿಯುವ ನೀರಿನ ಸಮಸ್ಯೆಯನ್ನು
ಬಗೆಹರಿಸುವ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಇವತ್ತಿಗೂ ಜನ ಕಂಪನಿ ಪ್ರದೇಶದಿಂದ ಕುಡಿಯುವ ನೀರು ತರುತ್ತಿದ್ದಾರೆ. ಪಂಚಾಯತಿ ಆಗಿ ಮೇಲ್ದರ್ಜೆಗೇರಿಸಿದ ಪರಿಣಾಮ ನಾಗರಿಕರಿಗೆ ನಯಾ ಪೈಸೆಯ ಪಯೋಗವಾಗಲಿಲ್ಲವೆಂಬುದು ಬಹಳ ಸ್ಪಷ್ಟ.ಇದರೊಂದಿಗೆ ಪಟ್ಟಣ ಪಂಚಾಯಿಂದ
ನಿರ್ಮಿಸಲಾಗುತ್ತಿರುವ ಟಾರು ರಸ್ತೆಗಳು ಕಳಪೆ ಗುಣಮಟ್ಟದಿಂದ ನಿರ್ಮಾಣವಾಗುತ್ತಿವೆ.ಕಾಮಗಾರಿ ನಿರ್ಮಾಣ ಮಾಡಿದ ತಿಂಗಳೊಳಗೆ ರಸ್ತೆಗಳು ಹಾಳಾಗಿ ಮೊದಲಿನಂತೆ ದಗ್ಗು-ದಿನ್ನೆಗಳಿಂದ ಕೂಡಿದ ರಸ್ತೆಗಳಾಗಿ ಉಳಿಯಲಿವೆ.ಕಳಪೆಯಾಗಿ ರಸ್ತೆ ನಿರ್ಮಾಣವಾಗುತ್ತಿದ್ದರೂ ಅಧಿಕಾರಿಗಳು ಗುತ್ತಿಗೆದಾರರನ್ನು ಪ್ರಶ್ನಿಸದೇ ಸುಮ್ಮನಿರುವುದು ಹಲವು ಅನುಮಾನ ಮೂಡಿಸಿದೆ. ಕಳಪೆ ರಸ್ತೆ ನಿರ್ಮಿಸುತ್ತಿರುವ ಗುತ್ತಿಗೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ
ನಿಮ್ಮ ಮೌನವಿದೆ. ಕೂಡಲೇ ನೀವು ಕಳಪೆಯಾಗಿ ನಿರ್ಮಿಸಲಾಗಿರುವ ಮತ್ತು ನಿರ್ಮಿಸಲಾಗುತ್ತಿರುವ
ರಸ್ತೆಗಳನ್ನು ಮರು ನಿರ್ಮಾಣಗೊಳ್ಳುವಂತೆ ನೋಡಿಕೊಳ್ಳಬೇಕು. ಅಷ್ಟೇ ಅಲ್ದೆ ಬಸ್ ಶೆಟ್ಟರ್ ಆವರಣದಲ್ಲಿ ಇರಿಸಲಾಗಿರುವ ಎಲ್ಲಾ ಡಬ್ಬಾ ಮುಂತಾದ ಸಾಮಾಗ್ರಿಗಳನ್ನು
ತೆಗಿಸಿ ಪ್ರಯಾಣಿಕರಿಗೆ ಅನುಕೂಲ
ಮಾಡಿಕೊಡಬೇಕು.ಮತ್ತು ಪ್ರಯಾಣಿಕರಿಗೆ ಆಸನದ ವ್ಯವಸ್ಥೆ ಮಾಡಬೇಕು.ಒಂದು ವಾರದೊಳಗೆ ಎಲ್ಲಾ ಬೇಡಿಕೆಗಳು ಹಿಡೇರಬೇಕು ಇಲ್ಲವಾದಲ್ಲಿ ಪಟ್ಟಣ ಪಂಚಾಯಿತಿಗೆ ಬೀಗ ಜಡಿಯಲಾಗುವದು ಎಂದು
CITU ಹಟ್ಟಿ ಘಟಕದ ಅಧ್ಯಕ್ಷ ವೈ ಬಸವರಾಜ್ ಮಲ್ಲಾಪೂರ ಹೇಳಿದರು.
Aishwarya Taxi specializes in reliable airport taxi services to make your travel stress-free. Our fleet includes sedans, Innovas, and SUVs to cater to all your needs, ensuring punctual service and competitive pricing for every journey.
Need a quick and reliable Bangalore airport drop? Arjun cabs ensures on-time service with professional drivers and comfortable vehicles. Trust us to make your airport journey safe, convenient, and stress-free.