ಚವಡಿಹಾಳ ಪಂಚಾಯತ್ ಹಸ್ತಕ್ಕೆ ವಿಜಯಲಕ್ಷ್ಮಿ..!
ಇಂಡಿ : ತಾಲ್ಲೂಕಿನ ಚವಡಿಹಾಳ ಗ್ರಾಮ ಪಂಚಾಯಿತ್ ನೂತನ ಅಧ್ಯಕ್ಷರಾಗಿ ಶ್ರೀ ರಮೇಶಗೌಡ ಮ ಬಿರಾದಾರ (ಚವಡಿಹಾಳ) ಹಾಗೂ ಉಪಧ್ಯಕ್ಷರಾಗಿ ಶರಣಮ್ಮ ಅಶೋಕ ಬಿರಾದಾರ ರವರು (ಚೋರಗಿ) ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ಕೆ.ಎಸ್ ಲಕ್ಷ್ಮೀಶ ಅವರು ಘೋಷಣೆ ಮಾಡಿದರು.
7-ಅಗಸ್ಟ್ ಸೋಮವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ರಮೇಶಗೌಡ ಬಿರಾದಾರ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಶರಣಮ್ಮ ಅಶೋಕ ಬಿರಾದಾರ ನಾಮಪತ್ರ ಸಲ್ಲಿಸಿದ್ದರು.
ಸಾಮಾನ್ಯ ಸಭೆ ಕರೆದು ನಾಮಪತ್ರ ಪರಿಶೀಲನೆ ಮಾಡಲಾಯಿತು. ಚವಡಿಹಾಳ ಗ್ರಾಮ ಪಂಚಾಯತ್ 12 ಸದಸ್ಯರು ಸಭೆಗೆ ಹಾಜರಿದ್ದರು. ಅಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಇದ್ದುದರಿಂದ ರಮೇಶಗೌಡ ಬಿರಾದಾರ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಸ್ಥಾನಕ್ಕೂ ಒಂದೇ ನಾಮಪತ್ರ ಸಲ್ಲಿಸಿದ್ದರಿಂದ ಶರಣಮ್ಮ ಅಶೋಕ ಬಿರಾದಾರ ಅವರನ್ನು ಉಪಾಧ್ಯಕ್ಷ ಎಂದು ಅವಿರೋಧವಾಗಿ ಆಯ್ಕೆ ಮಾಡಿ ಪ್ರಕಟಿಸಲಾಯಿತು.
ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತಿದ್ದಂತೆ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಅಧಿಕಾರ ಸ್ವೀಕರಿಸಿ ಅಧ್ಯಕ್ಷ ರಮೇಶಗೌಡ ಬಿರಾದಾರ ಮತ್ತು ಉಪಾಧ್ಯಕ್ಷ ಶರಣಮ್ಮ ಬಿರಾದಾರ ಮಾತನಾಡಿ, ನಾವು ಜನರ ಸೇವಕರು. ಜನರ ಆಶಯಕ್ಕೆ ತಕ್ಕಂತೆ ಕಾನೂನಾತ್ಮಕ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಚುನಾವಣಾ ಅಧಿಕಾರಿ ಶ್ರೀ ಕೆ ಎಸ್ ಲಕ್ಷ್ಮೀಶ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀ ಸಿ, ಜಿ ಪಾರೆ. ಗ್ರಾಮ ಪಂಚಾಯತ್ ಸದಸ್ಯ ಕಾಮಣ್ಣ ದಶವಂತ, ಸುದಿಷ್ಟನಾ ದಶವಂತ , ಸುಮಿತ್ರಾ ಬಡಿಗೇರ, ತಾರಾಬಾಯಿ ಶಿವಶರಣ, ಸಾಹೇಬಗೌಡ ಪಾಟೀಲ, ದಿಲ್ ಶಾದ ಬಿ ಚೌಧರಿ, ಪ್ರಕಾಶ ಹಲಸಂಗಿ, ಕುಮಾರ ಬಿರಾದಾರ, ರಾಜಕುಮಾರ ಆವರಾದಿ, ಶರಣು ಜೇವೂರ ಉಪಸ್ಥಿತರಿದ್ದರು.