ಇಂಡಿ : ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಶೀ ಚೌಡೇಶ್ವರಿ ಜಾತ್ರೆಯ ವಿಜೃಂಣೆಯಿಂದ ನಡೆಯುವುದು.
ದಿನಾಂಕ 29-05-2022 ರಂದು ಚತುರ್ದಶಿ ದಿನದಂದು ಚೌಡೇಶ್ವರಿ ಮತ್ತು ನರಸಿಂಹ ದೇವರಿಗೆ ಬೇಳೆಗ್ಗೆ 7.00ಕ್ಕೆ ವಿಶೇಷ ಪೂಜೆ ಮತ್ತು ಉಡಿ ತುಂಬುವ ಕಾರ್ಯಕ್ರಮ ದೇವರ ದರ್ಶನ ಎಂದು ಶ್ರೀ ಚೌಡೇಶ್ವರಿ ಜಾತ್ರೆಯ ಕಮೀಟಿಯ ಅಧ್ಯಕ್ಷರು ನಿಂಗಪ್ಪ ಕುಂಬಾರ ಹಾಗೂ ಇನ್ನುಳಿದ ಎಲ್ಲ ಸದಸ್ಯರು ಜಾತ್ರಾ ಮಹೋತ್ಸವದ ಪ್ರಕಟಣೆ ತಿಳಿಸಿದ್ದಾರೆ.
ಸೋಮವಾರ ದಿನಾಂಕ 30-05-2022 ರಂದು ದೇವರ ಉತ್ಸವ ಸಾಯಂಕಾಲ 4 ಕ್ಕೆ ಮೂಲ ದೇವಸ್ಥಾನ ದಿಂದ ಕುದರಿ ಯವರ ಮನೆಗೆ ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಭಕ್ತರು ಉಡಿ ತುಂಬುತ್ತಾರೆ, ಅದೇ ದಿನ ಸಂಜೆ 7 ಕ್ಕೇ ಕುದರಿ ಯವರ ಮನೆಯಿಂದ ಮೂಲ ದೇವಸ್ಥಾನಕ್ಕೆ ದೇವರು ಆಗಮನ.
ಮಂಗಳವಾರ ದಿನಾಂಕ 31-05-2022 ರಂದು ದೇವರ ಉತ್ಸವ ಸಾಯಂಕಾಲ 4 ಕ್ಕೆ ಮೂಲ ದೇವಸ್ಥಾನ ದಿಂದ ಮೇತ್ರಿ ಯವರ ಓಣಿಯಲ್ಲಿ ತವರು ಮನೆಗೆ ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಭಕ್ತರ ಮನೆ ಮನೆಗೆ ಹೋಗಿ ಉಡಿ ತುಂಬುತ್ತಾರೆ, ಅದೇ ದಿನ ಸಂಜೆ 7 ಕ್ಕೇ ಮೇತ್ರಿ ಯವರ ಮನೆಯಿಂದ ಸಿಡಿಮದ್ದು , ಪಟಾಕಿ ಸಿಡಿಸುತ್ತ ಮೂಲ ದೇವಸ್ಥಾನಕ್ಕೆ ದೇವರು ಆಗಮನ. ಜಾತ್ರೆಯ ಸಂದರ್ಭದಲ್ಲಿ ಅನ್ನ ದಾಸೋಹದ ಕಾರ್ಯಕ್ರಮ ಇರುತ್ತದೆ.