ವ್ಯವಹಾರಿಕ ಕೌಶಲ್ಯ ಹೆಚ್ಚಳಕ್ಕೆ ಮಕ್ಕಳ ಸಂತೆ ಸಹಕಾರಿ; ಚಿದಾನಂದ ಅವಟಿ
ತಿಕೋಟಾ: ಪ್ರಾಥಮಿಕ ಶಾಲಾ ಹಂತದಲ್ಲೆ ಮಕ್ಕಳು ಶಿಕ್ಷಣ ಪಡೆಯುವದರ ಜೊತೆಗೆ ಅವರಲ್ಲಿ ದೈನಂದಿನ ಜೀವನದಲ್ಲಿ ವ್ಯವಹಾರಿಕ ಕೌಶಲ್ಯ ಹೆಚ್ಚಳಕ್ಕೆ ಶಾಲೆಯಲ್ಲಿ ಏರ್ಪಡಿಸಿದ ಮಕ್ಕಳ ಸಂತೆ ಸಹಕಾರಿಯಾಗಿದೆ ಎಂದು ಮಾಣಿಕೇಶ್ವರಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಚಿದಾನಂದ ಅವಟಿ ಹೇಳಿದರು.
ತಾಲ್ಲೂಕಿನ ಕನಮಡಿ ಗ್ರಾಮದ ಮಾಣಿಕೇಶ್ವರಿ ಶಿಕ್ಷಣ ಸಂಸ್ಥೆಯ ಕನ್ನಡ ಹಾಗೂ ಆಂಗ್ಲ ಮಾಧ್ಯಮದ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳು ಸ್ಚಯಂ ಉದ್ಯೋಗದ ಮೂಲಕ ಸ್ವಾವಲಂಬಿ ಜೀವನ ನಡೆಸಲು ಈ ಸಂತೆ ಮೇಳ ಮಕ್ಕಳ ಬದುಕಿಗೆ ಸಹಕಾರಿಯಾಗಲಿದೆ ಎಂದರು.
ತಾಲ್ಲೂಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚನ್ನಯ್ಯ ಮಠಪತಿ ಮಾತನಾಡಿ ಮಕ್ಕಳ ಸಂತೆ ಏರ್ಪಡಿಸುವದರಿಂದ ಮಕ್ಕಳಿಗೆ ತೂಕ, ಲೀಟರ್ ಮಾಪನ, ಸಂಕಲನ, ವ್ಯವಕಲನ , ಗುಣಾಕಾರ ಸೇರಿದಂತೆ ಇತರೆ ಮೌಖಿಕವಾಗಿ ಲೆಕ್ಕ ಮಾಡುವ ಕಲೆ ಬೆಳೆಯುವದು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ ಹೊಸಮನಿ, ಶಂಕರಗೌಡ ಬಿರಾದಾರ, ರಾಮು ಚಡಚಣ, ಮುಖ್ಯೋಪಾಧ್ಯಾಯ ಬಿ.ಎಸ್.ಪಡನೂರ, ಗ್ರಾಮಸ್ಥರು ಮಕ್ಕಳು ಇದ್ದರು.


















