ಮಕ್ಕಳ ದಿನಾಚರಣೆ, ನಾಳೆ ಪೋಷಕ-ಶಿಕ್ಷಕರ ಸಭೆ
ಚಡಚಣ: ಸರ್ಕಾರದ ನಿರ್ದೇಶನದಂತೆ ನವ್ಹೆಂಬರ್ 14 ಶುಕ್ರವಾರ ರಾಷ್ಟ್ರದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ ನೇಹರು ಅವರ ಜನ್ಮದಿನದ ನಿಮಿತ್ಯ ಆಚರಿಸುವ ಮಕ್ಕಳ ದಿನಾಚರಣೆಯಂದು ತಾಲ್ಲೂಕಿನ ಎಲ್ಲ ಸರಕಾರಿ,ಅನುದಾನಿತ ಹಾಗೂ ಅನುದಾನ ರಿಹಿತ ಶಾಲೆಗಳಲ್ಲಿ ಪೋಷಕರ-ಶಿಕ್ಷಕರ ಮಹಾ ಸಭೆಯನ್ನು ಕಡ್ಡಾಯವಾಗಿ ಆಯೋಜಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಿದಾನಂದ ಕಟ್ಟಿಮನಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಕ್ಕಳಿಗಾಗಿ ವಿಶೇಶ ಕಾರ್ಯಕ್ರಮ ಆಯೋಜಿಸಲಾಗಿದ್ದು,ಈ ಸಭೆಗೆ ಗ್ರಾಮದ ಹಿರಿಯರು,ಸಾಹಿತಿಗಳು,ಶಿಕ್ಷಣ ಪ್ರೇಮಿಗಳು,ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.


















