ಸಂಸ್ಕಾರ ಕಲಿತ ಮಕ್ಕಳು ಭ್ರಷ್ಟನಾಗಲು ಸಾಧ್ಯವಿಲ್ಲ..! ಮಂಜುನಾಥ
ಇಂಡಿ: ಅಕ್ಷರ ಕಲಿತ ಮಕ್ಕಳು ಭ್ರಷ್ಟರಾಗಬಹುದು. ಆದರೆ ಸಂಸ್ಕಾರ ಕಲಿತ ಮಕ್ಕಳು ಎಂದಿಗೂ ಭ್ರಷ್ಟನಾಗಲು ಸಾಧ್ಯವಿಲ್ಲ ಎಂದು ಅಂಕಣಕಾರ, ಸಾಹಿತಿ, ಮಂಜುನಾಥ ಜುನಗೊಂಡ ಹೇಳಿದರು.
ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬಿಎ, ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ದೇಶ ಕಟ್ಟುವಲ್ಲಿ ಯುವ ವಿದ್ಯಾರ್ಥಿ ಸಮೂಹ ಎಡಬಲ ಆಲೋಚನೆಗಳಲ್ಲಿ ಮುಳುಗದೆ ಹೆಚ್ಚು ಸಕ್ರಿಯವಾಗಬೇಕಿದೆ. ಇಂದು ನಮ್ಮತನ ಬೆಳಿಸಿಕೊಳ್ಳಬೇಕಿದೆ. ಹಲಸಂಗಿ ಗೆಳೆಯರು ನಮ್ಮ ನೆಲದ ಅಸ್ಮಿತೆ. ಅಂತಹವರ ಬಗ್ಗೆ ಅರಿತುಕೊಳ್ಳಬೇಕಿದೆ, ನಮ್ಮವರ ಬಗ್ಗೆ ತಿಳಿದುಕೊಳ್ಳದೇ ಜಾಗತಿಕ ಸಂಗತಿಗಳನ್ನು ತಿಳಿದುಕೊಳ್ಳಲು ಹಂಬಲಿಸುತ್ತಿರುವ ಯುವ ಸಮೂಹದ ನಡೆ ನಿಜಕ್ಕೂ ವಿಷಾಧಕರ ಸಂಗತಿಯಾಗಿದೆ ಎಂದರು.
ಪ್ರಾಚಾರ್ಯ ಪ್ರೊ. ಆರ್.ಎಚ್. ರಮೇಶ ಅಧ್ಯಕ್ಷತೆವಹಿಸಿ ಮಾತನಾಡಿ, ನಮ್ಮ ಕಾಲೇಜು ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಉಷಾ ಯೋಜನೆಗೆ ಆಯ್ಕೆಯಾಗಿದ್ದು, ರೂ. ೫ಕೋಟಿ ಮಂಜೂರು ಮಾಡಿದೆ, ಅದನ್ನು ಅತ್ಯಂತ ಪಾರದರ್ಶಕವಾಗಿ ಬಳಕೆ ಮಾಡಿಕೊಂಡು ಕಾಲೇಜಿನ ಶೈಕ್ಷಣಕ ಮತ್ತು ಮೂಲಭೂತ ಸೌಕರ್ಯಗಳನ್ನು ವಿಸ್ತರಿಸಲು ಯೋಜಿಸಲಾಗಿದೆ ಎಂದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಇಂಡಿ ಮಾದರಿಯಾಗಿ ಮಾಡಲು ಎಲ್ಲ ರೀತಿಯಂದಲೂ ಪ್ರಯತ್ನಸಲು ಹಳೆಯ ವಿದ್ಯಾರ್ಥಿಗಳ ಸಹಕಾರವು ಅವಶ್ಯಕವಾಗಿ ಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪದಕಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಅಲ್ಲಾಭಕ್ಷ ವಾಲಿಕಾರ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಪ್ರೊ.ಕಿರಣ ರೇವಣಕರ, ಐಕ್ಯೂಎಸಿ ಸಂಚಾಲಕರಾದ ಡಾ. ಶಿರೀನುಸುಲ್ತಾನ ಇನಾಂದಾರ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ವಿಜಯಮಹಾಂತೇಶ ದೇವರ, ಗ್ರಂಥಪಾಲಕರಾದ ಪ್ರೊ.ತಿಪ್ಪಣ್ಣ ವಾಗ್ದಾಳ, ಪ್ರೊ.ರಾಜಲಕ್ಷ್ಮಿ ಆರ್, ಎನ್.ಎಸ್.ಎಸ್ ಘಟಕದ ಸಂಯೋಜನಾಧಿಕಾರಿ ಪ್ರೊ. ಪರಸಪ್ಪ ದೇವರ, ಸತೀಶಕುಮಾರ ಚುಂಚೂರು, ಸೋಮಲಿಂಗ ಗಂಜಿ, ಡಾ. ಸುರೇಖಾ ವಾರದ, ಪ್ರೊ. ಕಾಶೀನಾಥ ಜಾಧವ ಮೊದಲಾದವರು ಉಪಸ್ಥಿತರಿದ್ದರು.
ವಾರ್ಷಿಕ ವರದಿ ವಾಚನವನ್ನು ಡಾ. ತ್ರಿವೇಣ ಬನಸೊಡೆ ಮಂಡಿಸಿದರು. ಪ್ರೊ. ಎಸ್. ಜೆ. ಮಾಡ್ಯಾಳ ಸ್ವಾಗತಿಸಿದರು. ಪ್ರೊ. ಕವೀಂದ್ರ ಚಾಬುಕಸ್ವಾರ ನಿರೂಪಿಸಿದರು. ಪ್ರೊ. ಎಮ್.ಎಚ್. ಮೋಮಿನ್ ವಂದಿಸಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬಿಎ, ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಾಧ್ಯಾಪಕ ಮಂಜುನಾಥ ಜುನಗೊಂಡ ಮಾತನಾಡಿದರು.