ಮಕ್ಕಳು ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಸಹ ಕಲಿಯಬೇಕು..!
ಇಂಡಿ: ಮಕ್ಕಳು ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಸಹ ಕಲಿಯಬೇಕು. ಹಿರಿಯರಿಗೆ ಗೌರವ ಕೊಡುವುದು, ಕಿರಿಯರಿಗೆ ಸಹೋದರತೆಯ ಭಾವನೆಯಿಂದ ಕಾಣುವುದನ್ನು ಕಲಿಯಬೇಕುಎಂದು ನಿವೃತ್ತ ಪ್ರಾಚಾರ್ಯೆ ಶೈಲಜಾ ತೆಲ್ಲೂರ ಹೇಳಿದರು.
ಅವರು ತಾಲೂಕಿನ ಚಿಕ್ಕಬೇವನೂರ ಗ್ರಾಮದ ಎಚ್‌ಪಿಎಸ್ ಶಾಲೆಯಲ್ಲಿ ೭ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ನಿವೃತ್ತ ಶಿಕ್ಷಕ ಜೆ.ಎಸ್. ಸುತಾರ್ ಮಾತನಾಡಿದರು.
೭ನೇ ತರಗತಿ ೬ನೇ ತರಗತಿ ೫ನೇ ತರಗತಿ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರುಗಿದವು ಸಹನಾ ವಾಲಿಕಾರ, ಪ್ರತಿಜ್ಞಾ ದೊಡಮನಿ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮುಖ್ಯ ಗುರುಮಾತೆ ಸರೋಜಿನಿ ಮಾವಿನಮರ ತಮ್ಮ ಅಧ್ಯಕ್ಷೀಯ ಮಾತುಗಳನ್ನಾಡಿದರು.
ಪ್ರಾಸ್ತಾವಿಕವಾಗಿ ರವಿ ವಾಲಿಕಾರ ಮಾತನಾಡಿದರು.
ಮಲ್ಲು ತಳವಾರ, ಕಸ್ತೂರಿ ಅವಟಿ, ಆರ್.ಎಂ. ಮುಜಾವರ, ಎಸ್.ಎಸ್. ನಿಪ್ಪಾಣಿ, ವಿದ್ಯಾರ್ಥಿ ಪ್ರತಿನಿಧಿ ಪ್ರತಿಜ್ಞಾ ದೊಡ್ಡಮನಿ ,ಎಸ್.ಡಿ.ಎಂ.ಸಿ ಸದಸ್ಯ ಮೈಬೂಬ್ ಅಂಜುಟಗಿ ಭಾಗವಹಿಸಿದ್ದರು.
ಇಂಡಿ: ತಾಲೂಕಿನ ಚಿಕ್ಕಬೇವನೂರ ಗ್ರಾಮದ ಎಚ್‌ಪಿಎಸ್ ಶಾಲೆಯಲ್ಲಿ ೭ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶೈಲಜಾ ತೆಲ್ಲೂರ ಮಾತನಾಡಿದರು.



















