ವೀರ ಮಾತೆಯರ ಮುಕುಟಮಣಿ ರಾಣಿ ಚೆನ್ನಮ್ಮ
ಇಂಡಿ : ವೀರರಾಣ ಕಿತ್ತೂರು ಚೆನ್ನಮ್ಮ ದೇಶ ರಕ್ಷಣೆಗೆ ಧರ್ಮ ರಕ್ಷಣೆಗೆ ಹೋರಾಡಿದ ವೀರ ತಾಯಿಯರ ಸಾಲಿನ ಮುಕುಟ ಮಣ ಎಂದು ನಾದ ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಸಿ.ಎಂ.ಬಂಡಗರ ಹೇಳಿದರು.
ಅವರು ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾ ಭವನದಲ್ಲಿ ನಡೆದ ವೀರರಾಣ ಕಿತ್ತೂರು ಚೆನ್ನಮ್ಮ ಅವರ ೨೪೬ ನೇಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಥ್ಯಾಕರೆಯ ಹೂಂಕಾರ ಕಿತ್ತೂರಿನ ಸ್ವಾಭಿಮಾನ ಕೆರಳಿಸುತ್ತದೆ ಎಂದು ಚೆನ್ನಮ್ಮ ನವರು ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ, ಮಹಾಮುಖಂಡ ಗುರುಸಿದ್ದಪ್ಪ ಎಲ್ಲರೂ ಸೇರಿ ಬ್ರೀಟಿಷರ ಸೈನ್ಯದ ಮೇಲೆ ವಿಜಯಸಾಧಿಸಿರದಕ್ಕೆ ವಿಜಯೋತ್ಸವಕ್ಕೆ ಈಗ ೨೦೦ ವರ್ಷ ಎಂದರು.
ಕಂದಾಯ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಮಾತನಾಡಿ ಆದರ್ಶ ಎನ್ನಬಹುದಾದ ಎಲ್ಲ ಗುಣಗಳು ಒಳಗೊಂಡು ಬದುಕಿದರೆ ಹೀಗೆ ಬದುಕಬೇಕು ಎಂದು ತೋರಿಸಿಕೊಟ್ಟ ಅಗಣತ ಗುಣಗಳ ಆದರ್ಶ ಗುಣಗಳ ರಾಣ ಚೆನ್ನಮ್ಮ ಎಂದರು.
ಆನಂದ ಹುಣಸಗಿ, ಪ್ರಕಾಶ ನಾಯಕ್ ಮಾತನಾಡಿದರು.
ವೇದಿಕೆಯ ಮೇಲೆ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ವಿ.ಎಚ್. ಬಿರಾದಾರ, ಧನಪಾಲಶೆಟ್ಟಿ ದೇವೂರ, ಟಿ.ಎಸ್.ಅಲಗೂರ ಇದ್ದರು.
ಸಮಾರಂಭದಲ್ಲಿ ಇಂಡಿ ತಾಲೂಕಾ ಪಂಚಮಸಾಲಿ ಸಮಾಜದ ಕಾರ್ಯದರ್ಶಿ ಶಿವಾನಂದ ಚಾಳಿಕಾರ, ಕರವೇ ಅಧ್ಯಕ್ಷ ಬಾಳು ಮುಳಜಿ, ಶಿವು ಮಲಕಗೊಂಡ, ಶರಣು ಬಂಡಿ,ರಮೇಶ ಬಿರಾದಾರ, ಸಂತೋಷ ದೇವರ, ರಾಜು ಗುಜಗುಂಟಿ, ಪ್ರಶಾಂತ ಬಿರಾದಾರ, ಸಂಗು ಬಿರಾದಾರ, ರಾಜು ಕಮತಗಿ, ನಾಗೇಶ ಹೆಗಡ್ಯಾಳ,ಅಶೋಕ ಬಳಬಟ್ಟಿ, ಗದಿಗೆಪ್ಪ ಬೇಟಗೇರಿ, ಸಚೀನ ಮೆಂಡೆಗಾರ, ಶ್ರೀಕಾಂತ ಗಡಗಲಿ, ಶ್ರೀಶೈಲಗೌಡ ಬಿರಾದಾರ, ಸಂತೋಷ ಲಚ್ಯಾಣ, ಅನೀಲ ಪ್ರಸಾದ ಏಳಗಿ, ಎಸ್.ಆರ್.ಮುಜಗೊಂಡ, ಬಸವರಾಜ ರಾಹೂರ ಮತ್ತಿತರಿದ್ದರು.
ಇಂಡಿ ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾ ಭವನದಲ್ಲಿ ನಡೆದ ವೀರರಾಣ ಕಿತ್ತೂರು ಚೆನ್ನಮ್ಮ ಅವರ ೨೪೬ ನೇಯ ಜಯಂತಿ ಕಾರ್ಯಕ್ರಮದಲ್ಲಿ ಬಂಡಗಾರ ಮಾತನಾಡಿದರು.