ವಿಜಯಪುರ : ರಾಣಿ ಚೆನ್ನಮ್ಮ ಪುತ್ಥಳಿ ನಿರ್ಮಾಣ ಪಂಚಮಸಾಲಿ ಸಮಾಜದ ಸ್ವಾಭಿಮಾನದ ಪ್ರತೀಕ, ಅದರ ಖರ್ಚು ವೆಚ್ಛ ನಿಭಾಯಿಸುವ ಶಕ್ತಿ ಸಮಾಜಕ್ಕಿದೆ, ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ವಿ.ಎಚ್. ಬಿರಾದಾರ ಹೇಳಿದರು.
ವಿಜಯಪುರ ನಗರದಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,
ಇಂಡಿ ತಾಲೂಕು ಮಿನಿ ವಿಧಾನ ಸೌಧದ ಎದುರು ಪುತ್ಥಳಿ ನಿರ್ಮಾಣಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಭೂಮಿ ಪೂಜೆ ನೆರವೇರಿಸಿದ್ದರು. ಬಳಿಕ ಇವರದ್ದೇ ಆಡಳಿತಾವಧಿಯಲ್ಲಿ ಅದನ್ನು ತೆರವುಗೊಳಿಸಲಾಯಿತು. ಅದನ್ನು ಖಂಡಿಸಿ ಹೋರಾಟ ನಡೆಸಿದಾಗ ಶಾಸಕರು ಕೇವಲ 90 ದಿನದಲ್ಲಿ ಪುತ್ಥಳಿ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಈವರೆಗೂ ಆ ಕಾರ್ಯ ಕೈಗೂಡಿಲ್ಲ.
ಮಿನಿ ವಿಧಾನ ಸೌಧದ ಆವರಣದಲ್ಲಿಯೇ ಮೂರ್ತಿ ಪ್ರತಿಷ್ಟಾಪಿಸಬೇಕೆಂಬುದು ಸಮಾಜದ ಬೇಡಿಕೆ ಇದೆ ಎಂದರು.