ಇಂಡಿ : ಕಳೆದ 75 ವರ್ಷಗಳಿಂದ ನಿವೇಶನ ಮತ್ತು ಜೀವಿಸಲು ಮನೆಯಿಲ್ಲದೆ ಅಲೆಮಾರಿ ಜನಾಂಗದ ಚೆನ್ನದಾಸರ ಬದುಕು ಕತ್ತಲೆಯಲ್ಲಿ ಆವರಿಸಿತ್ತು. ಇದನ್ನು ಅರಿತ ಸಾಮಾಜೀಕ ಕಾರ್ಯಕರ್ತ ಹಾಗೂ ಅಲೆಮಾರಿ ಜನರ ಯುವ ಹೋರಾಟಗಾರ ಪ್ರೀತು ದಶವಂತ ಮತ್ತು ಚನ್ನದಾಸರ ಸಮುದಾಯದ ಜಿಲ್ಲಾ ಅಧ್ಶಕ್ಷ ಸಂಜೀವ ಕುಮಾರ ದಶವಂತ ಇವರು, ದಿನಾಂಕ : 25/2/ 2022 ರಂದು ಜಿಲ್ಲಾಧಿಕಾರಿ, ಸಮಾಜಕಲ್ಶಾಣ ಇಲಾಖೆಯ ಉಪನಿರ್ದೇಶಕರಿಗೆ ಹಾಗೂ ಜಿಲ್ಲಾ ವ್ಶವಸ್ಥಾಪಕ ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ ಇವರನ್ನು ಬೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಸರಕಾರದ ಆದೇಶಗಳು ಕಡತಗಳಲ್ಲಿಯೇ ಉಳಿದಿವೆ. ಅಲೆಮಾರಿ ಜನರಿಗೆ ಸೂರು (ನಿವೇಶನ) ಮತ್ತು ಮೂಲಭೂತ ಸೌಲಭ್ಶಗಳು ದೊರಕಿಸಿ ಕೊಡದಿದ್ದರೆ ಉಗ್ರವಾದ ಹೋರಾಟ ಮಾಡಲು ನಾವು ಹಿಂಜರಿವುದಿಲ್ಲ. 10 ವರ್ಷಗಳಿಂದ ನಿರಂತರ ಮನವಿ ಪತ್ರಗಳನ್ನು ಕೊಟ್ಟರು ಯಾವೋಬ್ಬ ಅಧಿಕಾರಿಗಳು ಸ್ಪಂದಿಸಿಲ್ಲ. ಅಲೆಮಾರಿ ಜನರ ಬದುಕಿನ ಜೊತೆ ಚೆಲ್ಲಾಟವಾಡದೆ ಅಕ್ರಮವಾಗಿ ಸರಕಾರಿ ಜಾಗದಲ್ಲಿ ವಾಸಿಸುತ್ತಿರುವ ಅಲೆಮಾರಿ ಚೆನ್ನದಾಸರ ಜನರಿಗೆ ಸರಕಾರಿ ಜಾಗವನ್ನು ಲೇಔಟ್ಗಳಾಗಿ ನಿರ್ಮಿಸಿಕೊಟ್ಟು ನೆಮ್ಮದಿಯಾಗಿ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡಬೇಕೆಂದು ಪ್ರೀತು ದಶವಂತ ಹೊತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಜೀವಕುಮಾರ ದಶವಂತ ಅವರು ಮಾತನಾಡಿ, ಸರಕಾರದ ಯೋಜನೆಗಳು ಅತೀ ಹಿಂದುಳಿದ ಅಲೆಮಾರಿ ಚನ್ನದಾಸರ ಜನರಿಗೆ ಸಿಗುತ್ತಿಲ್ಲ. ಅಧಿಕಾರಿಗಳು ಇವರ ಭೌತಿಕ ಸ್ಥಿತಿಗತಿಗಳನ್ನು ಅರಿತು ಸ್ಪಂದಿಸಬೇಕೆಂದು ಕಳಕಳಿಯಿಂದ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಅಲೆಮಾರಿ ಜಿಲ್ಲಾ ಘಟಕದ ಖಜಾಂಚಿ ಸಂತೋಷ ದಶವಂತ ˌಇಂಡಿ ತಾಲೂಕಾ ಅಲೆಮಾರಿ ಸಮುದಾಯದ ಅಧ್ಶಕ್ಷ ವಿಠೋಬ ರಾಜು ದಶವಂತ ˌ ಇಂಡಿ ತಾಲೂಕ ಪ್ರಧಾನ ಕಾರ್ಯದರ್ಶಿ ಮಾರೂತಿ ದಶವಂತ, ಶಂಕರ ಕೋಡೆˌ ಗಿರಿಯಪ್ಪ ದಾಸರ್ ˌ ಸಿದ್ದು ದಾಸರ್ ˌ ವಿಠೋಬ ಬಸಂತ ದಶವಂತ, ರವಿ ದಶವಂತ ಮತ್ತು ಅಲೆಮಾರಿ ಎಸಿ ಘಟಕದ ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು.