ಚಂದ್ರಯಾನ್ ಯಶಸ್ವಿ, ಭಾರತೀಯರಿಗೆ ಐತಿಹಾಸಿಕ ಸಾಧನೆ : ಚಂದ್ರು ಕಂಬಾರ..!
ಇಂಡಿ : ವಿಶ್ವವೇ ಕೂತಹಲ ಮತ್ತು ಬೆರಗುಗಣ್ಣಿನಿಂದ ಭಾರತವನ್ನು ನೋಡುತ್ತಿತ್ತು. ಆದರೆ ಭಾರತದ ಇಸ್ರೋ ವಿಜ್ಞಾನಿಗಳು ಚಂದ್ರಯಾನ- 3 ಸೇಫ್ ಲ್ಯಾಂಡ್ ಮಾಡುವ ಮೂಲಕ ಯಶಸ್ವಿಯಾಗಿದ್ದು ಐತಿಹಾಸಿಕ ದಾಖಲೆ ಮಾಡಿದ್ದು, ದೇಶದ ಪ್ರಗತಿಗೆ ಈ ಸಾಧನೆ ಸಾಕ್ಷಿ ಎಂದು ಪೋಲಿಸ್ ಇಲಾಖೆಯ ಚಂದ್ರು ಕಂಬಾರ ಹೇಳಿದರು.
ಪಟ್ಟಣದ ಪ್ರತಿಷ್ಠಿತ ಜಿ ಅರ್ ಜಿ ಕಲಾ ಮತ್ತು ವಾಯ್ ಎ ಪಾಟೀಲ ಕಲಾ ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ಶ್ರೀ ಶಾಂತೇಶ್ವರ ಕ್ರಿಕೇಟ್ ಅಸೊಶಿಯೇಶನ್ ಆಶ್ರಯದಲ್ಲಿ ಇಸ್ರೋ ಅಧ್ಯಕ್ಷರು ಹಾಗೂ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿ ಮಾತಾನಾಡಿದರು.
ಭಾರತೀಯ ಬಾಹ್ಯಾಕಾಶ ವಿಜ್ಞಾನದ ಮುನ್ನಡೆಯ ಪ್ರತೀಕ, ದೇಶದ ಹೆಮ್ಮೆಯ ಇಸ್ರೋದ ಚಂದ್ರಯಾನ ಸರಣಿಯ ಮೂರನೇ ಯಾನದ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವ ಮೇಲ್ಮೈನಲ್ಲಿ ಇಳಿದಿದೆ. ಈ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ.
ಅಲ್ಲದೇ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ಕೌತುಕದ ಕ್ಷಣವನ್ನು ಕಣ್ತುಂಬಿಕೊಳ್ಳುವುದಕ್ಕೆ ಭಾರತೀಯರು ಮಾತ್ರವಲ್ಲ ಇಡೀ ವಿಶ್ವವೇ ಬೆರಗುಗಣ್ಣಿನಿಂದ, ಕುತೂಹಲದಿಂದ ಎದುರು ನೋಡುತ್ತಿತ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಶಾಂತೇಶ್ವರ ಕ್ರಿಕೇಟ ಅಸೋಸಿಯೇಷನ್ ಅಧ್ಯಕ್ಷ ಅನಿಲಗೌಡ ಬಿರಾದಾರ, ಮಂಜುನಾಥ ತಮಶೇಟ್ಟಿ, ವಿಶಾಲ ಸಿಂದಗಿ, ಮಂಜುನಾಥ ನಾಯಿಕೊಂಡಿ, ಅಯುಭ ಇಂಡಿಕ ರ, ರಾಕೇಶ್, ಬಸು ಪೂಜಾರಿ, ಸಂಗು ಮಸಳಿ, ಬಾಬಾ ನಾಗಠಾಣ, ಕರೀಮ, ಇಬು, ಸಾಧಿಕ್, ಸಂತೋಷ ಪರಸನವರ, ಸಂಜು ಸಲಾಕೆ, ಜಟ್ಟೆಪ್ಪ ಪೂಜಾರಿ ಇನ್ನೂ ಅನೇಕ ಯುವ ಆಟಗಾರರು ಉಪಸ್ಥಿತರಿದ್ದರು.