ಇಂಡಿ : ದೇಶದ ಅಭಿವೃದ್ಧಿಪೊರಕ ಬಜೇಟ್,ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕೃಷಿ ಕ್ಷೆತ್ರಕ್ಕೆ ನಿರುದ್ಯೋಗಿ ಯುವಕರಿಗೆ ಉತ್ತೆಜನ ನೀಡಲು ಕೌಶಲ್ಯ ಅಭಿವೃದ್ಧಿ ಯೋಜನೆ , ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಹಿಂದುಳಿದ ವರ್ಗದ ಜನರಿಗೆ ಆಧ್ಯತೆ ,ರಾಷ್ಟ್ರಿಯ ಹೆದ್ದಾರಿ ಯೋಜನೆ ರೈಲ್ವೆ ಮಾರ್ಗ ಅಭಿವೃದ್ಧಿ ಬಡವರಿಗೆ ಆವಾಸ್ ಯೋಜನೆ ಹಾಗೂ
ಎಲ್ಲ ವರ್ಗದ ಜನರಿಗೆ ಅನ್ವಯ ವಾಗುವ ಬಜೆಟ್ ಮಾಡಲಾಗಿದೆ.
ಬಿಜೆಪಿ ಮುಖಂಡ ರಾಮಸಿಂಗ್ ಕನ್ನೊಳ್ಳಿ ಇಂಡಿ
ಈ ಬಜೆಟ್ ನಲ್ಲಿ 9 ಕ್ಷೇತ್ರಗಳಿಗೆ ಉತ್ತೇಜನ ನೀಡಲಾಗಿದೆ.
ವಿಶೇಷವಾಗಿ ರೈತರಿಗೆ 1.52 ಕೋಟಿ ರೂಪಾಯಿ ಮೀಸಲಿಡಲಾಗೀದೆ, ಮಹಿಳಾಭಿವೃದ್ದಿಗೆ 3 ಲಕ್ಷ ಕೋಟಿ ರೂಪಾಯಿ ಮಿಸಲಿಡಲಾಗಿದೆ. ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಸಲುವಾಗಿ ಅವರಿಗೆ 10 ಲಕ್ಷ ರೂಪಾಯಿವರೆಗೂ ಸಾಲ ಸೌಲಭ್ಯ, ತರಕಾರಿ ಮಾರುಕಟ್ಟೆ ಆರಂಭಕ್ಕೆ ಒತ್ತು ಕೃಷಿಯಲ್ಲಿ ಸಹಭಾಗಿತ್ವಕ್ಕೆ ಆದ್ಯತೆ,1000 ಕೈಗಾರಿಕಾ ತರಬೇತಿಗಳು ಸ್ಥಾಪನೆ, 20 ಲಕ್ಷ ಯುವಕರಿಗೆ ಕೌಶಲ್ಯಭಿವೃದ್ದಿ ಯೋಜನೆ , ಮಹಿಳಾ ಉದ್ಯೋಗಿಗಳ ಹಾಸ್ಟೇಲ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ, ಇದೂಂದು ಪರಿಪೂರ್ಣವಾದ ಬಜೆಟ್.
ಶಾಂತು ಕಂಬಾರ, ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳು
ಹಿಂದುಳಿದ ವರ್ಗಗಳ ಮೋರ್ಚಾ ವಿಜಯಪುರ
” 20 ಲಕ್ಷ ಯುವಕರಿಗೆ ಕೌಶಲ್ಯಾಭಿವೃಧ್ದಿ ಯೋಜನೆ,ಉನ್ನತ ಶಿಕ್ಷಣಕ್ಕೆ 10 ಲಕ್ಷ ಸಾಲ,ಕೈಗಾರಿಕಾ ಕಾರಿಡಾರ್, ತೆರಿಗೆ ಪಧ್ದತಿಯ ಸರಳೀಕರಣ,ಗ್ರಾಮೀಣಾಭಿವೃದ್ಧಿ, ಮಹಿಳಾಭಿವೃದ್ದಿ ಗೆ ಬರಪೂರ ಕೊಡುಗೆ ನೀಡಿದ್ದು ಮುದ್ರಾ ಯೋಜನೆ ಬಡವರಿಗೆ ವರದಾನವಾಗಿದೆ.