ಇಂಡಿ : ಶ್ರೀಶೈಲ್‌ಗೆ ತೆರಳಿದ ಕರ್ನಾಟಕದ ಭಕ್ತರ ಮೇಲೆ ಆಂದ್ರಪ್ರದೇಶದ ಪುಂಡರು ಹಲ್ಲೆ ಮಾಡಿದ್ದು ಖಂಡನೀಯ. ಇನ್ನೂ ಉತ್ತರ ಕರ್ನಾಟಕದ ಹೆಚ್ಚು ಭಕ್ತಾದಿಗಳು ಪಾದಯಾತ್ರೆಯ ಮೂಲಕ ಆಂಧ್ರಪ್ರದೇಶದ ಶ್ರೀಶೈಲ ಕ್ಷೇತ್ರಕ್ಕೆ ಲಕ್ಷ ಲಕ್ಷ ಭಕ್ತರು ಮಲ್ಲಯ್ಯನ ದರ್ಶನ ಮಾಡಲು ಅಲ್ಲಿಗೆ ತೆರಳಿರುತ್ತಾರೆ. ಈ ಸಮಯದಲ್ಲಿ ಬೀಳಗಿ ತಾಲೂಕಿನ ಶ್ರೀಶೈಲ್ ವಾರಿಮಠನನ್ನು ಆಂಧ್ರದ ವ್ಯಾಪಾರಿಗಳು ಕೇವಲ ಕುಡಿಯುವ ನೀರಿನ ಬಾಟಲ್ ಗೋಸ್ಕರ ನಡೆದ ಮಾತಿನ ಚಕಮಕಿ ಅವರ ಮಾರಣಾಂತಿಕ ಹಲ್ಲೆಗೆ ಕಾರಣವಾಗಿದೆ. ಅಲ್ಲದೆ ಇದೇ ವಿಷಯ ದೊಡ್ಡದಾಗಿಸಿ ಅಲ್ಲಿನ ಆಂಧ್ರ ವ್ಯಾಪಾರಿಗಳು ಕೂಡಿ ಕರ್ನಾಟಕದ ಎರಡು ನೂರಕ್ಕೂ ಹೆಚ್ಚು ವಾಹನಗಳನ್ನು ಧ್ವಂಸಗೊಳಿಸಿದ ವಿಷಯ ಖಂಡನೀಯ. ಆದಕಾರಣ ಕೂಡಲೇ ಆಂಧ್ರ ಪೊಲೀಸರು ಕರ್ನಾಟಕದ ಭಕ್ತಾದಿಗಳಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು. ಅಲ್ಲದೇ, ಹಲ್ಲೆ ಮಾಡಿದ ಆಂಧ್ರ ವ್ಯಾಪಾರಿಗಳನ್ನು ಬಂಧಿಸಿ ಅಲ್ಲಿ ಶಾಂತತೆಯನ್ನು ಕಾಪಾಡಲು ಕರವೇ ಆಗ್ರಹಿಸುತ್ತದೆ. ಕರ್ನಾಟಕ ಸರ್ಕಾರ ಪಾದಯಾತ್ರೆ ಮಾಡುವ ಭಕ್ತಾದಿಗಳಿಗೆ ವಿಶೇಷ ಕಾಳಜಿ ವಹಿಸಿ ಯಾತ್ರಾ ಮಾಡುವ ಭಕ್ತರಿಗೆ ಭದ್ರತೆ ವ್ಯವಸ್ಥೆ ಹಾಗೂ ಯಾತ್ರೆಗೆ ತೆರಳುವ ಯಾತ್ರಿಕರಿಗೆ ಪ್ಯಾಕೇಜನ್ನು ಮಾಡಬೇಕೆಂದು ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಕರವೇ ಅಧ್ಯಕ್ಷ ಶಿವರಾಜ್ ಕೆಂಗನಾಳ ಆಗ್ರಹಿಸಿದ್ದಾರೆ.