ಇಬ್ಬರು, ಶಾಸಕರ ವಿರುದ್ಧ ಕೇಸ್ ದಾಖಲು..ಏಕೆ..?
ವಿಜಯಪುರ: ಪ್ರಚೋದನಕಾರಿ ಭಾಷಣ ಹಿನ್ನೆಲೆ ಇಬ್ಬರು ಶಾಸಕರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.
ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಗೋಶಮಹಾಲ ಬಿಜೆಪಿ ಶಾಸಕ ಟಿ. ರಾಜಾಸಿಂಗ್ ವಿರುದ್ಧ ಕೇಸ್ ದಾಖಲು ಆಗಿದೆ. ವಿಜಯಪುರ ನಗರದ ಮಾರ್ಚ್ 4 ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಮೆರವಣಿಗೆ ಮಾಡಲಾಗಿತ್ತು. ಈ ವೇಳೆ ವಿಜಯಪುರ ನಗರದ ಶಿವಾಜಿ ಸರ್ಕಲ್ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಅಬ್ ಗಲಿ ಗಲಿ ಮೈ ಅಫ್ಜಲಖಾನ್, ಔರಂಗಜೇಬ ಹೈ.. ಇಸ್ ಲಿಯೇ ಅಬ್ ಗಲಿ ಗಲಿ ಮೇ ಶಿವಾಜಿ ಮಹಾರಾಜರ ಬನಾನ್ ಹೈ ಎಂದು ಶಾಸಕ ಟಿ. ರಾಜಾಸಿಂಗ್ ಭಾಷಣ ಮಾಡಿದ್ದರು. ಅಲ್ಲದೇ, ಅಗರ್ ಮೇರಾ ಹಾತ್ ಮೇ ಹೋಂ ಮಿನಿಸ್ಟರ್ ರಹಾತೋ ಗೋಸ್ಕೆ ಎನ್ಕೌಂಟರ್ ಕರಕ್ಕೆ, ಏಕ್ ಬಿ ಪಾಕಿಸ್ತಾನ ಘಸರೇ ಬಾಹ್ ನಹಿ ಆನೇತಕ್ ಜೈ ಭಾರತ ಮಾತಾಕಿ ಜೈ..ಜೈ ಛತ್ರಪತಿ ಶಿವಾಜಿ ಮಹಾರಾಜರು ಕರತ್ತಾ ಎಂದು ಭಾಷಣವನ್ನು ಶಾಸಕ ಯತ್ನಾಳ ಮಾಡಿದ್ದರು. ಅದಕ್ಕಾಗಿ ಕಲಂ: 153, 506, 504, 505(2) ಐಡಿಸಿ ಅಡಿಯಲ್ಲಿ ಗಾಂಧಿಚೌಕ್ ಪೊಲೀಸ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.