ಆಹಾರ ಕಿಟ್ ಗಳನ್ನು ವಿತರಿಸಿ ಮಾನವೀಯತೆ ಮೆರೆದ ಕೇರಿಂಗ್ ಸೋಲ್ಸ್ ಚಾರಿಟೇಬಲ್ ಟ್ರಸ್ಟ್
ವಿಜಯಪುರ : ದೀಪದ ಹಬ್ಬ ದೀಪಾವಳಿಯ ನಿಮಿತ್ಯವಾಗಿ ಕೇರಿಂಗ್ ಸೋಲ್ಸ್ ಚಾರಿಟೇಬಲ್ ಟ್ರಸ್ಟ್ ಬಾಗಲಕೋಟ ಕ್ರಾಸ್ ಹಿಂಭಾಗದ ಕೊಳಗೇರಿ ಪ್ರದೇಶದಲ್ಲಿ ಸುಮಾರು ೧೦೦ ಮನೆಗಳಿಗೆ ಆಹಾರ ಕಿಟ್ ಗಳನ್ನು ವಿತರಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಯೂಥ್ ಕಾಂಗ್ರೆಸ್ ಅಧ್ಯಕ್ಷ ಶಕೀಲ ಬಾಗಮಾರೆ ಮಾತನಾಡಿ, ಈ ದಿನಗಳಲ್ಲಿ ಜನರು ಜಾತಿ ಮತಿ ಎಂದು ಬಡಿದಾಡುತ್ತಿರುವಾಗ ಇಂತಹ ಕಾರ್ಯಗಳು ಎರಡೂ ಸಮೂಹ ನಡುವೆಗಳ ಮಧ್ಯೆ ಕೊಂಡಿಯಾಗಿ ಪ್ರೀತಿಭಾಂದವ್ಯವನ್ನು ಬೆಳೆಸುತ್ತದೆ. ಹಾಗೂ ಸಮಾಜದಲ್ಲಿ ಎಲ್ಲರೂ ಪ್ರೀತಿ ಬಾಂಧವ್ಯದಿAದ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಈ ಸಂದರ್ಭ ಇನ್ನೋರ್ವ ಅತಿಥಿಯಾದ ರಾಷ್ಟç ಪ್ರಶಸ್ತಿ ವಿಜೇತ ಜಾವೀದ ಜಮಾದಾರ ಮಾತನಾಡಿ, ಇಂತಹ ಕಾರ್ಯಕ್ರಮಗಳು ಇಡೀ ಭಾರತ ದೇಶದಲ್ಲಿ ಶಾಂತತೆಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ. ಅದರಂತೆ ಜನರಲ್ಲಿ ಪರಸ್ಪರ ಪ್ರೀತಿ ಬೆಳೆಸಲು ಹಬ್ಬಗಳು ಸಹಕಾರಿಯಾಗಿವೆ ಎಂದರು.
ಈ ಸಂದರ್ಭದಲ್ಲಿ ಮಹಿಳಾ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಗಂಗಾಧರ ಸೋನಾರ ಮಾತನಾಡಿ, ಇದು ಈ ಒಂದು ಕಾರ್ಯಕ್ರಮವು ಮಾನವೀಯತೆಗೆ ಉದಾಹರಣೆಯಾಗಿದೆ. ಪ್ರತಿಯೊಬ್ಬರು ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಪಂದನಾ ಸ್ವಯಂ ಸೇವಾ ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರಶಾಂತ ದೇಶಪಾಂಡೆ, ಕೇರಿಂಗ್ ಸೋಲ್ಸ್ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಎಂ.ಎಲ್.ದೊಡಮನಿ, ಟ್ರಸ್ಟಿಗಳಾದ ಶ್ರೀನಾಥ ಪಾಟೀಲ, ಬಂದೇನವಾಜ ಲೋಣಿ, ಸದಸ್ಯರಾದ ಮೆಹಬೂಬ ಎನ್ಕೆ., ಆರೀಫ ಸಗರ, ಜೈನುಲ ಆಬಿದ್ದೀನ, ಸುಮೀತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



















