ಸಿಂಧನೂರು: ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಬೂಸ್ಟರ್ ಡೋಸ್ಗೆ ಮಾಜಿ ಸಚಿವ, ಶಾಸಕ ವೆಂಕಟರಾವ್ ನಾಡಗೌಡ ಚಾಲನೆ ನೀಡಿದರು. ಸರ್ಕಾರ ಬೂಸ್ಟರ್ ಡೋಸ್ ನೀಡುತ್ತಿದ್ದು ಕೋವಿಡ್ ಲಸಿಕೆ ಪಡೆದು ೯ ತಿಂಗಳು ಆಗಿರುತ್ತದೆ. ಎರಡು ಡೋಸ್ ಲಸಿಕೆ ಪಡೆದವರಿಗೆ ಮೊಬೈಲ್ ಮೆಸೇಜ್ ಬರುತ್ತದೆ ಅವರು ತಪ್ಪದೆ ಬೂಸ್ಟರ್ ಡೋಸ್ ಪಡೆಯಬೇಕು.
ಇನ್ನು ಕೋವಿಡ್ ಲಸಿಕೆಯನ್ನು ಯಾರು ತೆಗೆದುಕೊಂಡಿಲ್ಲ ಅಂತವರು ಆರೋಗ್ಯ ಕೇಂದ್ರಗಳಿಗೆ ಬೇಟಿ ನೀಡಿ ತಪ್ಪದೆ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಬೆಂಗಳೂರು ಭಾಗದಲ್ಲಿ ರೈಲ್ವೆ ವಿಮಾನ ಪ್ರಯಾಣಿಸಬೇಕಾದರೆ ಕೊರೋನಾ ಲಸಿಕೆಯ ಪ್ರತಿಗಳು ಇದ್ದರೆ ಮಾತ್ರ ಅವಕಾಶ ನೀಡುತ್ತಾರೆ ಎಂದು ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು. ಈ ವೇಳೆ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಟಿ.ಹೆಚ್.ಓ ಅಯ್ಯನಗೌಡ ಪಾಟೀಲ್, ಸಿಓ ಹನುಮಂತ ರೆಡ್ಡಿ, ವೈದ್ಯ ಮಂಜುನಾಥ ಸೇರಿದಂತೆ ಅನೇಕರು ಇದ್ದರು.