ಇಂಡಿ : ತೋಟದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಕಳ್ಳಭಟ್ಟಿಯ ಸರಾಯಿಯನ್ನು ಅಬಕಾರಿ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ದೇಶಪಾಂಡೆ ತಾಂಡಾ 1 ರಲ್ಲಿ ನಡೆದಿದೆ. ಸುಮಿತ್ರಾ ಲಕ್ಷ್ಮಣ ರಾಠೋಡ ಮತ್ತು ಲಲಿತಾ ಶೇಡಗಿ ಬಂಧಿಸಿದ್ದಾರೆ. ಮೌಲ್ಯದ 2 ಲೀಟರ್ ಮದ್ಯವನ್ನು ಅಬಕಾರಿ ಪೊಲೀಸರು ಜಪ್ತಿಗೈದಿದ್ದಾರೆ. ಇಂಡಿ ಅಬಕಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂ ಎಚ್ ಪಡಸಲಗಿ ಅಬಕಾರಿ ನೀರಿಕ್ಷಕರ ಇಂಡಿ ವಲಯ ಇವರ ನೇತೃತ್ವದಲ್ಲಿ ವಾದಿರಾಜ ಎನ್ ,ಆಶ್ರೀತ ಅಬಕಾರಿ ಉಪ ನೀರಿಕ್ಷಕರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಗೂ ಜಿ.ಪಿ.ಕಟ್ಡಿಮನಿ, ಶಿವಶಂಕರ ಗೋಟ್ಯಾಳ, ಸಂಜೀವಕುಮಾರ ಹೂವಿನವರ, ಎಸ್ ಟಿ ದಳವಾಯಿ, ಶಿವಾನಂದ ಕೋಡತೆ ,ಸಂಜಯ್ ಆರ್ ಕುಲಕರ್ಣಿ ದಾಳಿಯಲ್ಲಿ ಪಾಲ್ಗೊಂಡರು.