ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ..!
ಇಂಡಿ: ತಾಲೂಕಿನ ಬೂದಿಹಾಳ ಗ್ರಾಮದಲ್ಲಿರುವ ತ್ಯಾಗವೀರ ಸಿರಸಂಗಿ ಲಿಂಗರಾಜ ದೇಸಾಯಿ ಶಿಕ್ಷಣ ಸಂಸ್ಥೆಯ “ದ ಯುನಿಕ್ ಪಬ್ಲಿಕ್ ಸ್ಕೂಲ್ ಬೂದಿಹಾಳ” ಶಾಲೆಯಲ್ಲಿ ಪ್ರಥಮ ವಾರ್ಷಿಕ ಸ್ನೇಹ ಸಮ್ಮೇಳನ ವಿಜೃಂಭಣೆಯಿAದ ನೆರವೇರಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಸಂಸ್ಥಾನ ಮಠ ಗುರುಪೀಠ ಇಂಡಿ ಹಾಗೂ ಕವಲಗಿಯ ಸದ್ಗುರು ಡಾ. ಅಭಿನವ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಮಾತನಾಡಿ, ತ್ಯಾಗವೀರ ಲಿಂಗರಾಜರ ಪರಿಚಯವನ್ನು ಮಾಡಿಕೊಡುತ್ತಾ ಶಿಕ್ಷಣ ಸಂಸ್ಥೆಯ ಹಾಗೂ ಮಕ್ಕಳ ಸಾಧನೆಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಉಜ್ವಲ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಶಿಕ್ಷಣ ಸಂಯೋಜಕ ಎ.ಓ. ಹೂಗಾರ ಮಾತನಾಡಿ, ಎಲ್ಲ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ಪರೀಕ್ಷೆಯ ಸೂಕ್ಷ್ಮತೆಗಳನ್ನು ಹೇಳಿ, ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು. ಎಲ್ಲ ಮಕ್ಕಳಲ್ಲಿ ಸೂಪ್ತ ಪ್ರತಿಭೆ ಇದ್ದೆ ಇರುತ್ತದೆ ಕಾರಣ ಎಲ್ಲ ವಿದ್ಯಾರ್ಥಿಗಳು ಓದಿನೆಡೆಗೆ ಗಮನ ನೀಡಬೇಕು. ಜೊತೆಗೆ ಎಲ್ಲ ಪಾಲಕರುಗಳು ಕೂಡ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಪ್ರೋತ್ಸಾಹ ಹಾಗೂ ಬೆಂಬಲವನ್ನು ನೀಡಬೇಕೆಂದು ಮಾರ್ಗದರ್ಶಿಸಿದರು.
ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸಂಗನಗೌಡ ಹಚಡದ ಅವರು ತಮ್ಮ ವಿಶೇಷ ಉಪನ್ಯಾಸದಲ್ಲಿ ಪಾಲಕರು ತಮ್ಮ ಮಕ್ಕಳನ್ನು ಹೇಗೆ ಸಂಸ್ಕಾರಯುತವಾಗಿ ಬೆಳೆಸಬೇಕು ಹಾಗೂ ಶಿಕ್ಷಕರುಗಳು ಕೂಡ ಮಕ್ಕಳಿಗೆ ನಾವಿನ್ಯಯುತವಾಗಿ ಬೋಧಿಸಿ ಪ್ರಚಲಿತ ಸ್ಪರ್ಧಾತ್ಮಕತೆಗೆ ತಕ್ಕಂತೆ ಅಣಿಗೊಳಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಎಸ್.ಎ. ಬಿರಾದಾರ (ಕನ್ನಾಳ), ಇವರು ಶಾಲೆಯ ಸಮಗ್ರ ಏಳಿಗೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಕುರಿತು ಪ್ರಶಂಶಿಸಿದರು.
ಸAಸ್ಥೆಯ ಅಧ್ಯಕ್ಷೆ ಶ್ರೀಮತಿ ಭಾರತಿ ಸಿದ್ದನಗೌಡ ಬಿರಾದಾರ ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನಮ್ಮ ಸಂಸ್ಥೆಯು ಪರಿಣಿತ ಹಾಗೂ ಶ್ರೇಷ್ಠ ಶಿಕ್ಷಕರುಗಳನ್ನು ಹೊಂದಿದ್ದು ಮಕ್ಕಳ ಏಳಿಗೆಗಾಗಿ ಸದಾ ಶ್ರಮಿಸುತ್ತದೆ ಎಂದು ಹೇಳುತ್ತಾ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬೆಂಬಲಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಕೆ.ವಿ. ಪಾಟೀಲ, ಶ್ರೀಮತಿ ಭಾರತಿ ಸಿದ್ದನಗೌಡ ಬಿರಾದಾರ, ನಿಂಗನಗೌಡ ಬಸನಗೌಡ ಬಿರಾದಾರ, ತ್ಯಾಗವೀರ ಸಿರಸಂಗಿ ಲಿಂಗರಾಜ ದೇಸಾಯಿ ಶಿಕ್ಷಣ ಸಂಸ್ಥೆ ಬೂದಿಹಾಳದ ಎಸ್.ಕೆ. ಕೋಲ್ಹಾರ ಃಖP ಇಂಡಿ, ಎಸ್.ಜಿ. ಬೋರಗಿ ಅಖP ಭತಗುಣಕಿ, ಆರ್.ಎ. ಗೋಳಗಿ, ಬಿ.ಎಸ್. ಛಪ್ಪರ, ಎಸ್.ಜಿ. ಲಕ್ಕುಂಡಿಮಠ, ಎಸ್.ಎನ್. ಮಂಗೊAಡ, ಆರ್.ಎಸ್. ಛಪ್ಪರ, ಡಾ.ಆನಂದ ವಾಯ್ ಗಲಗಲಿ, ಪಿ.ಎಸ್. ಕುಂಬಾರ, ಎಸ್.ಆರ್. ನಿಚ್ಚಳ, ಎ.ಎಂ. ಹಾವಿನಾಳ ಉಪಸ್ಥಿತರಿದ್ದರು.
ಬಿ.ಜಿ. ಗೊರನಾಳ, ಸುನಿತಾ ಇಂಡಿ ಇವರು ನಿರೂಪಿಸಿದರು.
ಇಂಡಿ: ತಾಲೂಕಿನ ಬೂದಿಹಾಳ ಗ್ರಾಮದಲ್ಲಿರುವ ತ್ಯಾಗವೀರ ಸಿರಸಂಗಿ ಲಿಂಗರಾಜ ದೇಸಾಯಿ ಶಿಕ್ಷಣ ಸಂಸ್ಥೆಯ “ದ ಯುನಿಕ್ ಪಬ್ಲಿಕ್ ಸ್ಕೂಲ್ ಬೂದಿಹಾಳ” ಶಾಲೆಯಲ್ಲಿ ಪ್ರಥಮ ವಾರ್ಷಿಕ ಸ್ನೇಹ ಸಮ್ಮೇಳನ ವಿಜೃಂಭಣೆಯಿAದ ನೆರವೇರಿತು.










