ರಾಜ್ಯದ ಪತ್ರಕರ್ತರಿಗೆ ನಿರಾಸೆ ಮೂಡಿಸಿದ ಬಜೆಟ್ : ಪವನ ಕೊಡಹೊನ್ನ..
ಇಂಡಿ : ರಾಜ್ಯ ಸರಕಾರದ ಬಜೆಟ್ ನಲ್ಲಿ ಪತ್ರಕರ್ತರಿಗೆ ವಿಶೇಷ ಮತ್ತು ಬಹುನಿರಿಕ್ಷೀತ ಬಜೆಟ್ ಆಕಾಂಕ್ಷೆ ಹೊಂದಿದ ಪತ್ರಕರ್ತರಿಗೆ ನಿರಾಸೆ ಮೂಡಿಸಿದೆ ಎಂದು ಕಾ ನಿ ಪ ಧ್ವನಿ ಸಂಘದ ತಾಲೂಕಾ ಅಧ್ಯಕ್ಷ ಪವನ ಕೊಡಹೊನ್ನ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ರಾಜ್ಯದ ಪತ್ರಕರ್ತರು 2023/24 ಸಾಲಿನ ಬಜೆಟ್ ನಲ್ಲಿ ಉಚಿತ ಬಸ್ ಪಾಸ್, ಮಾಶಾಸನದಲ್ಲಿ ಏರಿಕೆ, ಜಾಹಿರಾತು ನೀಡುವ ವಿಚಾರದಲ್ಲಿ ರಾಜ್ಯದ ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ, ಪ್ರಾದೇಶಿಕ ಪತ್ರಿಕೆಗಳಿಗೆ ಹಾಗೂ ರಾಜ್ಯ ಮಟ್ಟದ ಪತ್ರಿಕೆಗಳಿಗೆ ಸಮಾನ ರೀತಿಯಲ್ಲಿ ಅಮೂಲಾಗ್ರ ಬದಲಾವಣೆಯ ಜಾಹಿರಾತಿನ ನೀತಿಗಳನ್ನು ತರಬಹುದೆಂಬ ನಿರೀಕ್ಷೆಯಲ್ಲಿ ಇದ್ದ ಮಾಧ್ಯಮ ಲೋಕಕ್ಕೆ ತೀವ್ರ ನಿರಾಸೆಯನ್ನುಂಟು ಮಾಡಿದೆ.
ಈ ಸಂದರ್ಭದಲ್ಲಿ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕಾ ಅಧ್ಯಕ್ಷ ಪವನ ನಾ ಕೊಡಹೊನ್ನ,ಗೌರವಾಧ್ಯಕ್ಷ ಅಶೋಕ ನಾಯ್ಕೊಡಿ, ಶಿವರಾಜಕುಮಾರ ವಾಲಿಕಾರ, ಎಸ್ ಎಮ್ ಬಿರಾದಾರ, ಮೊಹಮ್ಮದ ನಾಸಿರ, ಸಂತೋಷ ಪ ಹೊಸಮನಿ, ಅರವಿಂದ ಕಾಂಬಳೆ, ಸಚೀನ ಇಂಡಿ, ರವಿ ಕುದುರೆ, ಸಂಜೀವ ಮಾಶ್ಯಳ ಹಾಗೂ ಇತರರು ಇದ್ದರು.


















