ಇಂಡಿ ; ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಮಧ್ಯಂತರ ಪರಿಹಾರ ಘೋಷಣೆ ಮಾಡದೇ ಇರುವ ಬಜೆಟ್ ತುಂಬಾ ನಿರಾಸೆ ತಂದಿದೆ ಎಂದು ಶಿಕ್ಷಕ ಆನಂದ ಬಿ ಕೆಂಭಾವಿ ಅಸಮಾಧಾನ ಹೊರಹಾಕಿದರು. ಪ್ರಸ್ತುತ ಬಜೆಟ್ ನಲ್ಲಿ ನೌಕರರಿಗೆ ಮಾರಕವಾಗಿರುವ NPS ರದ್ದುಗೊಳಿಸಿ ಹಳೇಪಿಂಚಣಿ ಜಾರಿಗೊಳಿಸುವ ಕುರಿತು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. NPS ರದ್ದತಿಯ ಯಾವದೇ ಅಂಶವನ್ನು ಬಜೆಟ್ ನಲ್ಲಿ ಪ್ರಸ್ತಾಪ ಮಾಡ್ಲಿಲ್ಲ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ತೀವ್ರಗೋಳಿಸಿತ್ತು. ಅವಾಗ ಸರ್ಕಾರದ ಪರವಾಗಿ ಸಚಿವರ ಮಾತಿನಂತೆ ಹೋರಾಟ ಹಿಂತೆಗೆದುಕೊಂಡಿತ್ತು. ಇದು ರಾಜ್ಯದ ಎಲ್ಲಾ NPS ನೌಕರರ ಮನಸ್ಸುಗಳಿಗೆ ತುಂಬಾ ನಿರಾಸೆ ಆಗಿದೆ. ಏಳನೇ ವೇತನ ಆಯೋಗದ ವರದಿ ಅನುಸರಿಸಿ ವೇತನ ಜಾರಿಗೆ ಮಾಡಬೇಕಿತ್ತು. ಆದ್ರೇ, ಸರ್ಕಾರ ತಮ್ಮ ಮಾತಿನಂತೆ ನಡೆದುಕೊಂಡಿಲ್ಲ ಎಂದರು.