VOJ ನ್ಯೂಸ್ ಡೆಸ್ಕ್: ಸೋಮವಾರದಂದು ದಕ್ಷಿಣ ಚೀನಾದಲ್ಲಿ ಪತನಗೊಂಡಿದ್ದ ಚೀನಾ ಈಸ್ಟರ್ನ್ ಏರ್ಲೈನ್ಸ್ ವಿಮಾನದ ಅವಶೇಷಗಳಿಂದ ವಿಮಾನದಲ್ಲಿದ್ದ 2 ಬ್ಲ್ಯಾಕ್ ಬಾಕ್ಸ್ಗಳಲ್ಲಿ ಒಂದನ್ನು ಚೀನಾ ವಾಯುಯಾನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಆದರೆ ಈ ಬ್ಲ್ಯಾಕ್ ಬಾಕ್ಸ್ಗೆ ತೀವ್ರ ಹಾನಿಯಾಗಿದೆ ಎನ್ನಲಾಗಿದೆ. ಅಪಘಾತಗಳ ಸಂದರ್ಭದಲ್ಲಿ ಘಟನೆಯ ಬಗ್ಗೆ ಮಾಹಿತಿ ನೀಡುವ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿರೋದ್ರಿಂದ ಬೋಯಿಂಗ್ 737 ವಿಮಾನವು ಏಕೆ ಪತನಗೊಂಡಿತು ಎಂಬುದಕ್ಕೆ ಸುಳಿವು ಸಿಗುವ ಸಾಧ್ಯತೆ ಇದೆ.