ಲಿಂಗಸೂಗೂರು: ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜೀ ಯವರ ಕನಸಿನಂತೆ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಯವರ ಸಂಕಲ್ಪದಂತೆ “ಸ್ವಚ್ಛ ಭಾರತದ” ಅಭಿಯಾನದಡಿ ಲಿಂಗಸುಗೂರ ತಾಲೂಕಿನ ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾದಿಂದ ಸ್ವಚ್ಚತಾ ಕಾರ್ಯ ಮಾಡಲಾಯಿತು.
ಮೋರ್ಚಾದ ಅಧ್ಯಕ್ಷರಾದ ಈಶ್ವರ ಎಮ್ ವಜ್ಜಲ್ ರವರ ನೇತೃತ್ವದಲ್ಲಿ ಲಿಂಗಸುಗುರ ನಗರದ ೨೨೦ ಕೆಇಬಿ ಅವರಣದ ಆರು ಕೋಟಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಂಡು ಸ್ವಚ್ಛತೆಯನ್ನು ನಡೆಸಿದರು.
ಇದಾದ ಬಳಿಕ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಯವರು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಮನ್ಕಿ ಬಾತ್ ಕಾರ್ಯಕ್ರಮವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಂಡಲ ಕಾರ್ಯದರ್ಶಿ ಜ್ಯೊತಿ ಸುಂಕದ್, ಸ್ಮಿತಾ ಅಂಗಡಿ, ಯುವ ಮೋರ್ಚದ ಪದಾಧಿಕಾರಿಗಳಾದ ಅಜಯ್ ಕುಮಾರ, ಸುರೇಶ ಮೇಟಿ, ಸೊಮು ನಾಯಕ, ಹರಿಶ, ಕೃಷ್ಣಾ ಯಲಗಲದಿನ್ನಿ ಅಮರೇಶ ಮತ್ತಿತರರು ಭಾಗವಹಿಸಿದ್ದರು.