ಮನೆ- ಮನೆಗೆ ತೆರಳಿ ಮತಯಾಚನೆ ಮಾಡಿದ ಬಿಜೆಪಿ ಕಾರ್ಯಕರ್ತರು.
ಇಂಡಿ: ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ
ಭಾಜಪ ಕಾರ್ಯಕರ್ತರು ಶುಕ್ರವಾರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಮನೆ- ಮನೆಗೆ ತೆರಳಿ ಕೇಂದ್ರ ಸರಕಾರದ ಸಾಧನೆಗಳ ಕರಪತ್ರವನ್ನು ವಿತರಿಸಿ
ಮತಯಾಚನೆ ಮಾಡಿದರು.
ಈ ಸದಂದರ್ಭದಲ್ಲಿ ಭಾಜಪ ಮುಖಂಡರಾದ ಅನೀಲ ಜಮಾದಾರ ಮಾತನಾಡಿ, ಮೇ.7 ರಂದು ನಡೆಯುವ
ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ
ನೀಡುವ ಮೂಲಕ ಸುಭದ್ರ ದೇಶ ಕಟ್ಟುವಲ್ಲಿ ನಾವು-ನೀವೆಲ್ಲ ಕೈ ಜೋಡಿಸೋಣ ಬಿಜೆಪಿ ಅಭ್ಯರ್ಥಿ ಜಿಗಜಿಣಗಿ ಅವರಿಗೆ ಮತದಾನ ಮಾಡೋಣ ಎಂದರು.
ಸ್ಥಳೀಯ ಕಾರ್ಯಕರ್ತರಾದ ಅಶೋಕ ಬಳಬಟ್ಟಿ ಮಾಧವರಾವ ಪವಾರ ಮಾತನಾಡಿ, ಬಿಜೆಪಿ ಸರಕಾರ ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿಗೆ ಯಾವುದೇ ಪೊಳ್ಳು ಗ್ಯಾರೆಂಟಿಗಳಿಗೆ ಕಿವಿಗೊಡದೆ, ದೇಶದ ಉಳಿವಿಗಾಗಿ ನಾವೆಲ್ಲರೂ ಕಡ್ಡಾಯವಾಗಿ ಬಿಜೆಪಿಗೆ
ಮತದಾನ ಮಾಡೋಣ ಎಂದರು.
ಭೀಮಾಶಂಕರ ಆಳೂರ, ಶ್ರೀಶೈಲ ಸೀತಿಮನಿ, ರಾಜಕುಮಾರ ಜಾಧವ, ಪ್ರಭು ಜಾಧವ, ಪ್ರಭಾಕರ ವಾಲೀಕಾರ, ಗೋಪಾಲ ಬೆನಕನಳ್ಳಿ, ನಿಂಗಪ್ಪ ಹೂಗಾರ, ರಸೂಲ್‍ಪಟೇಲ್ ಮಸಳಿ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ
ಭಾಜಪ ಕಾರ್ಯಕರ್ತರು ಶುಕ್ರವಾರ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಮನೆ-ಮನೆಗೆ ತೆರಳಿ ಕೇಂದ್ರ ಸರಕಾರದ ಸಾಧನೆಗಳ ಕರಪತ್ರವನ್ನು ವಿತರಿಸಿ
ಮತಯಾಚನೆ ಮಾಡಿದರು.