ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ಉದ್ದೇಶಿ ಮಾತಾನಾಡಿದ ಅವರು, ಪಟ್ಟಣದಲ್ಲಿ ನವೆಂಬರ್ 8 ಬೆಳಿಗ್ಗೆ 11 ಘಂಟೆಗೆ ಸಿಂದಗಿ ರಸ್ತೆಯ ಧನದಶೆಟ್ಟಿ ಮಂಗಲಕಾರ್ಯದಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣಸಿಂಗ್ ಆಗಿಮಿಸುತ್ತಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಸಮಾವೇಶ ಯಶಸ್ವಿಗೊಳಿಸಬೇಕೆಂದು ಹೇಳಿದರು.
2023ರ ಚುನಾವಣೆ ನಿಮತ್ಯವಾಗಿ ಇಡೀ ರಾಜ್ಯದಲ್ಲಿ ರಾಜ್ಯಧ್ಯಕ್ಷರ ನೇತೃತ್ವದಲ್ಲಿ 3 ತಂಡಗಳನ್ನು ರಚಿಸಿ , 223 ಮತಕ್ಷತ್ರಗಳಲ್ಲಿ ಪವಾಸಗೊಳಿಸುವ ಮೂಲಕ ರಾಜಕೀಯ ಸ್ಥಿತಿಗತಿ ಮತ್ತು ನಮ್ಮ ನಿಲವು ಸ್ವಷ್ಟಿಪಡಿಸುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನ ಸೇರಿಸುವ ಉದ್ದೇಶವಿಲ್ಲ ಆದರೆ ಭೂತ ಮಟ್ಟದ ಕಾರ್ಯಕರ್ತರನ್ನು ಸೇರಿಸುವ ಉದ್ದೇಶವಿದೆ. ಅವರಿಂದಲೇ ನಮ್ಮ ಗೆಲುವು ಎಂದು ಹೇಳಿದರು.
ಇನ್ನೂ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ ಜೊಡೊ ಯಾತ್ರೆ, ತೊಡೊ ಯಾತ್ರೆಯಾಗಿದೆ. ಅದಕ್ಕೆ ಉತ್ತರವಾಗಿ ಕೊಳ್ಳೆಗಾಲ ನಗರ ಸಭೆಯ ಉಪಚುನಾವಣೆ ಮತ್ತು ವಿಜಯಪುರ ಜಿಲ್ಲೆಯ ಮಹಾ ನಗರ ಪಾಲಿಕೆಯಲ್ಲಿ ಬಿಜೆಪಿ ಗೆಲುವು. ಈ ಗೆಲುವು ಜನರು ಬಿಜೆಪಿ ಪರ ಇದ್ದಾರೆ. ಇಡೀ ದೇಶದಲ್ಲಿ ಮತ್ತು ರಾಜ್ಯದಲ್ಲಿ ಜನರು ಬಿಜೆಪಿ ಪರ ಎಂದು ಹೇಳಿದರು.
ಇಂಡಿಯಲ್ಲಿ ಅಧಿಕಾರದಲ್ಲಿಲ್ಲ. ಆದರೆ ಅತ್ಯಂತ ಯಶಸ್ವಿ ಭೂತ ಮಟ್ಟದ ಸಮಿತಿಯಿದೆ.ಹಾಗಾಗಿ ಈ ಬಾರಿ ಬಿಜೆಪಿ ಪಕ್ಷದ ಪಕ್ಕಾ ಗೆಲುವು ಸಾಧಿಸುತ್ತೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪತ್ರಕರ್ತರು ಅಭ್ಯರ್ಥಿ ಘೋಷಣೆ ಬಗ್ಗೆ ಪ್ರಶ್ನೆಸಿದ್ದಕ್ಕೆ ಎಲ್ಲಿಯೂ ಮುಂಚಿತವಾಗಿ ಅಭ್ಯರ್ಥಿ ಘೋಷಣೆ ಮಾಡುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ, ಜಿಲ್ಲಾ ರೈತ ಮೂರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಪ್ರಧಾನಕಾರ್ಯದರ್ಶಿ ಶಿವರುದ್ರ ಬಾಗಲಕೋಟ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಅನೀಲ ಜಮಾದಾರ, ಶ್ರೀಶೈಲಗೌಡ ಬಿರಾದಾರ, ಶೀಲವಂತ ಉಮರಾಣಿ, ಮುತ್ತುರಾಜ ದೇಸಾಯಿ, ಹಣಮಂತರಾಯಗೌಡ ಪಾಟೀಲ ಹಾಗೂ ರಾಜಶೇಖರ ಯರಗಲ್ ಇನ್ನೂ ಅನೇಕರು ಉಪಸ್ಥಿತರಿದ್ದರು.