ಬೇಡಿದವರಿಗೆ ಬೇಡಿದನ್ನು ನೀಡುವ ಸುಕ್ಷೇತ್ರ ಗೊಬ್ಬುರ ಬಿ ಗ್ರಾಮದ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ( ಶ್ರೀ ಮಡ್ಡಿಸಿದ್ದ ) ದೇವರು.
ಮಹಾಶಿವರಾತ್ರಿ ನಿಮಿತ್ತವಾಗಿ ಮಾ.10 ರಿಂದ 15 ವರಗೆ ಜರುಗುತ್ತಿರುವ.
ಅಫಜಲಪುರ: ತಾಲ್ಲೂಕಿನ ಗೊಬ್ಬುರ ಬಿ. ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಬೀರಲಿಂಗೇಶ್ವರ ( ಶ್ರೀ ಮಡ್ಡಿಸಿದ್ದ ) ದೇವರು ಜಾತ್ರಾ ಮಹೋತ್ಸ ಇದೆ ದಿನಾಂಕ 10 ರಿಂದ 15 ವರೆಗೆ ಅದ್ದೂರಿಯಾಗಿ ಜರುಗುತ್ತಿದೆ. ದಿ.10 ರವಿವಾರದಂದು ರಾತ್ರಿ 8:30 ಕ್ಕೆ ಜಾತ್ರೆಯ ಪ್ರವಚನ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಪರಮ ಪೂಜ್ಯ ಮಾಳಿಂಗರಾಯ ಮಹಾರಾಜ ಹುಲಜಂತಿ ಇವರು ವಹಿಸುತ್ತಾರೆ.
ದಿ.11 ಸೋಮವಾರದಂದು ಬೆಳಿಗ್ಗೆ 10:00 ಗಂಟೆಗೆ ಪೈಲ್ವಾನರಿಂದ ಕಲ್ಲಿನ ಭಾರ ಎತ್ತುವ ಸ್ಪರ್ಧೆ ಜರಗುವುದು ಹಾಗೂ ಬೃಹತ್ ದನಗಳ ಜಾತ್ರೆ ಹಾಗೂ ರಾತ್ರಿ ಪ್ರಸಿದ್ಧ ಡೊಳ್ಳಿನ ಪದಗಳು ಜರಗುತ್ತದೆ.
ದಿ.12 ಮಂಗಳವಾರದಂದು ಬೆಳಗ್ಗೆ 10:00 ಗಂಟೆಗೆ ಎತ್ತುಗಳು ಕಲ್ಲಿನ ಭಾರ ಯಳೆಯುವ ಸ್ಪರ್ಧೆ ನಡೆಯುತ್ತದೆ.ಇದಲ್ಲದೆ ವಿಶೇಷವಾಗಿ ರಾತ್ರಿ 10:00 ಗಂಟೆಗೆ ಡಾಲ್ ಪದಗಳು ಅಫಜಲಪುರದ ಅಮೋಘಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ ಗಾಯಕರಾದ ಸಿದ್ದು ಅಫಜಲಪುರ ಹಾಗೂ ಗೊಬ್ಬುರ ಬಿ ಹುಣಚಿರಾಯ ಡೊಳಿನ ಗಾಯನ ಸಂಘ ಗಾಯಕರಾದ ಹುಣಚು ಇವರ ಒಂದು ಡೊಳ್ಳಿನ ಪದಗಳ ಜುಗಲ್ ಬಂದಿ ನಡೆಯುತ್ತದೆ.
ಕೊನೆಯದಾಗಿ ದಿ.15 ರಾತ್ರಿ 9:00 ಗಂಟೆಗೆ ಶ್ರೀ ಯಲ್ಲಮ್ಮದೇವಿಯ ನಾಟಕವು ಸಕಲ ಸದ್ಬಕ್ತರ ಸಮುಖದಲ್ಲಿ ನಡೆಯುತ್ತದೆ ಆದ್ದರಿಂದ ಎಲ್ಲಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಜಾತ್ರೆಗೆ ಬರಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ನಮ್ಮ ವಾಹಿನಿಯೊಂದಿಗೆ ಮಾತನಾಡಿ ಮನವಿಯನ್ನು ಮಾಡಿದ್ದರು.
ಇದಲ್ಲದೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಿವಿಧ ಮಠಾದೀಶರು ವಹಿಸಲ್ಲಿದ್ದಾರೆ ಹಾಗೂ ಗಣ್ಯ ವ್ಯಕ್ತಿಗಳು ಸೇರಿದಂತೆ ಹಲವು ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಗಳಿಂದ ಈ ಜಾತ್ರೆಗೆ ಭಕ್ತರು ಬರುತ್ತಾರೆ.
ಇದೆ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಅರುಣಕುಮಾರ ಅಪ್ಪಾರಾಯ ಪೋಲಿಸ್ ಪಾಟೀಲ್, ಪ್ರಭೂಲಿಂಗ ದೇವತ್ಕಲ್ , ಹುಣಚಪ್ಪ ಮರೇಪ್ಪ ಮೈನಾಳ, ರೇವಣಸಿದ್ದಪ್ಪ ಬಂಡಪ್ಪ ಪೂಜಾರಿ, ನರಸಪ್ಪ ಬಂಡಪ್ಪ ಪೂಜಾರಿ, ಸುರೇಶ್ ಧೂಪಾದ, ಬೀರಪ್ಪ ಮ್ಯಾಕೇರಿ, ನಾಗಣ್ಣ ನಂದುರ, ಚಿತ್ರಪ್ಪ ಹಿರೇಪೂಜಾರಿ, ಜಟ್ಟೇಪ್ಪ ಮಾಯಗೊಂಡ, ಯಲ್ಲಾಲಿಂಗ ಕಾಂಬಳೆ, ಪರಮೇಶ್ವರ ಕುಮಸಗಿ, ಶ್ರೀಶೈಲ ಎಮಜಿ, ಸೈಬಣ್ಣ ಪೂಜಾರಿ, ಬೈಲಪ್ಪ ಹುಣಚಪ್ಪ ತಳಕೇರಿ, ಜಟ್ಟೆಪ್ಪ ರೇವಣಸಿದ್ದ ಪೂಜಾರಿ, ನಿಂಗಣ್ಣ ಪೂಜಾರಿ, ಸೈಬಣ್ಣ ಪೀರಪ್ಪ ಕಾಳಗೊಂಡ, ಶಿವೂ ಕುಂಬಾರ, ಶಿವಪ್ಪ ಹೊನ್ನಂಗಿ ಪೂಜಾರಿ, ಶಿವಾನಂದ ಯಶವಂತಪ್ಪ ಕಟನೂರ, ಯಲ್ಲಪ್ಪಾ ಮಾಯಗೊಂಡ, ಗಂಗಣ್ಣ ತುಳಜಪಾ ಹರಳಯ್ಯ, ರಾಚಪ್ಪ ಹುಮನಾಬಾದ, ಶಾಂತಪ್ಪ ಗುರಪ್ಪ ನಂದೂರ ಸೇರಿದಂತೆ ಅನೇಕರು ಭಕ್ತಾದಿಗಳಿಗೆ ಸ್ವಾಗತ ಕೋರಿದರು.