ರಾಯಚೂರು : ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ಕೇಸರಿ ಶಾಲು ವಿವಾದಕ್ಕೆ ಬಿಜೆಪಿ ಕಾರಣವಾಗಿದ್ದು, ಮುಗ್ಧ ಮಕ್ಕಳನ್ನು ಬಳಸಿಕೊಂಡು ರಾಜ್ಯದಲ್ಲಿ ಕೊಮುದಳ್ಳುರಿ ಸೃಷ್ಟಿಸುತ್ತದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಅಧ್ಯಕ್ಷ ತಾಹೇರ್ ಹುಸೇನ್ ಆರೋಪಿಸಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಉಡುಪಿಯಲ್ಲಿ ವಿವಾದ ಸೃಷ್ಟಿ ಆದಾಗ ತರುಣಿಯರು ಸ್ಕಾರ್ಫ್ ಧರಿಸಿದರೆ ಹುಡುಗರು ಕೇಸರಿ ಶಾಲು ಧರಿಸಿ ಬರುತ್ತಾರೆ ಎಂದು ಹೇಳಿಕೆ ನೀಡಿ ಅಲ್ಲಿನ ಬಿಜೆಪಿ ಶಾಸಕ ಈ ವಿವಾದವನ್ನು ಕೋಮು ಬಣ್ಣ ನೀಡಿದರು. ಅದೇರೀತಿ ಈಶ್ವರಪ್ಪ ಅವರು ಕೇಸರಿ ಶಾಲುಗಳು ಪೂರೈಸಿದ್ದು ನಾವೇ ಅಂತ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಇವೆಲ್ಲವನ್ನು ಗಮನಿಸದಾಗ ಬಹಳ ಸ್ಪಷ್ಟವಾಗಿ ಆರ್ಥ ಆಗುವುದು ಇದರ ಹಿಂದೆ ಬಿಜೆಪಿಯ ಕೈವಾಡ ಇದೆ ಎಂದು ಕಾಣುತ್ತದೆ. ರಾಜ್ಯದ ಶಾಲಾ – ಕಾಲೇಜುಗಳಲ್ಲಿ ಸಾಮರಸ್ಯ,ಸೌಹಾರ್ದತೆ ಮನೆ ಮಾಡಿತ್ತು.ಅಂತಹ ವಾತಾವರಣವನ್ನು ಬಿಜೆಪಿ ಈಗ ಕಲುಷಿತಗೊಳಿಸಿದೆ.
ಮುಸ್ಲಿಂ ವಿದ್ಯಾರ್ಥಿನಿಯರು ಈ ಮುಂಚೆಯಿಂದ ಹಿಜಾಬ್ ಹಾಕಿಕೊಂಡೇ ಕಾಲೇಜಿಗೆ ಬರುತ್ತಿದ್ದಾರೆ ಆದರೆ ಕೆಲ ದಿನಗಳಿಂದ ವಿಕೃತಿ ಮನಸ್ಸಿನ ಜನರಿಂದ ಈ ಸಮಸ್ಯೆ ಉಂಟಾಗಿದೆ.ಬಸವರಾಜ್ ಎತ್ನಾಳ್ , ಸಿ ಟಿ ರವಿ,ಪ್ರತಾಪ್ ಸಿಂಹ, ಇವರ ಹೇಳಿಕೆಗಳು ಪ್ರಚೋದನಕಾರಿ ಯಾಗಿದ್ದು, ಸಮಸ್ಯೆ ಬಗೆ ಹರಿಸಿ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡಬೇಕಾದ ಸರ್ಕಾರದಲ್ಲಿ ಇರುವವರೇ ಬೆಂಕಿಗೆ ತುಪ್ಪ ಸುರಿಯುವ ಹಾಗೆ ಕೆಲಸ ಮಾಡುತ್ತಿದಾರೆ ಎಂದು ಆರೋಪಿಸಿದರು.
ಶಾಲೆಗಳಲ್ಲಿ ಕಲ್ಲು ತೂರಾಟ, ಗ್ರಂಥಾಲಯಗಳನ್ನು ಧ್ವಂಸ ಗೊಳಿಸಿದ್ದು,ರಾಷ್ಟ್ರ ಧ್ವಜದ ಕಂಬದ ಮೇಲೆ ಕೇಸರಿ ಧ್ವಜ ಹಾರಿಸಿದ್ದರು ಹಿಜಾಬ್ ಹಾಕಿದ್ದ
ರಾಷ್ಟ್ರ ಧ್ವಜದ ಕಂಬದ ಮೇಲೆ ಕೇಸರಿ ಧ್ವಜ ಹಾರಿಸಿದವರು ಹಿಜಾಬ್ ಹಾಕಿದ್ದ ವಿದ್ಯಾರ್ಥಿಗಳಲ್ಲ ಬದಲಾಗಿ ಕೇಸರಿ ಶಾಲುಧಾರಿಗಳು.ಇದರ ಬಗ್ಗೆ ಸರಕಾರ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದರು.
ಗಣರಾಜ್ಯೋತ್ಸವ ದಿನದಂದು ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ತೆರವುಗೊಳಿಸಿದ ನ್ಯಾಯಮೂರ್ತಿ ಮಲ್ಲಿಕಾರ್ಜುನ ಗೌಡ ವಿರುದ್ದ ರಾಜ್ಯಾದ್ಯಂತ ಪ್ರತಿಭಟನೆ ಮಾಡಿದರೂ,ಸರ್ಕಾರ ಅವರ ವಿರುದ್ದ ಕ್ರಮ ಕೈಗೊಂಡಿಲ್ಲ.ಮುಖ್ಯಮಂತ್ರಿ,ಗೃಹ ಸಚಿವರು,ಕಾನೂನು ಸಚಿವರು ಈ ಬಗ್ಗೆ ಮಾತನಾಡಿಲ್ಲ.ಕೂಡಲೇ ನ್ಯಾ.ಮಲ್ಲಿಕಾರ್ಜುನ ಗೌಡ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಲತೀಫ್, ಏಜಾಜ್ ಅಹ್ಮದ್,ಫಾರೂಕ್, ಮುನಿಫ್ ಇದ್ದರು.