ರಾಯಚೂರು: ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಧಿಸಿರುವ ವೀಕೆಂಡ್ ಕರ್ಫ್ಯೂ ನಿಂದ ಬೀದಿ ವ್ಯಾಪಾರಿಗಳ ಪರಿಸ್ಥಿತಿ ಹೇಳತೀರದಾಗಿದೆ.
ಕರ್ಫ್ಯೂ ವಿಧಿಸಿದರೂ ಕೂಡ ಅಗತ್ಯ ವಸ್ತುಗಳಿಗೆ ಸರಕಾರ ಅವಕಾಶ ನೀಡಿದ್ದರೂ ನಗರದ ಮಾರ್ಕೆಟ್ ಹಾಗೂ ಇತರ ಮುಖ್ಯ ವ್ಯಾಪಾರದ ಜಾಗಗಳಲ್ಲಿ ಜನರು ಮಾರುಕಟ್ಟೆಯತ್ತ ಬಾರದಿದ್ದರಿಂದ ವ್ಯಾಪಾರಿಗಳು ತುಂಬಾ ಆರ್ಥಿಕ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ತರಕಾರಿ ವ್ಯಾಪಾರಿಗಳು, ಹಣ್ಣಿನ ವ್ಯಾಪಾರಿಗಳು, ಹೂ ವ್ಯಾಪಾರಿಗಳು ಸಂಚಾರ ವ್ಯವಸ್ಥೆ ಇಲ್ಲದಿದ್ದರೂ ಸಹ ಕಷ್ಟಪಟ್ಟು ಆಗೋ ಹಿಗೋ ಮುಂಜಾನೆ ೪ ಗಂಟೆಗೆ ಮಾರುಕಟ್ಟೆಗೆ ಬಂದರೂ ಸಹ ಯಾವುದೇ ವ್ಯಾಪಾರ ಆಗದೆ ತುಂಬಾ ಗೋಳಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಕುರಿತು ಬೀದಿ ವ್ಯಾಪಾರಗಳಲ್ಲಿ ಕೇಳಿದಾಗ ಅವರು ಸರ್ಕಾರ ವಿಧಿಸಿರುವ ಈ ಕರ್ಫ್ಯೂ ಮತ್ತು ಲಾಕ್ಡೌನ್ ಗಳಂತಹ ನಿಯಮಗಳಿಂದ ಜನರು ಮಾರುಕಟ್ಟೆಯತ್ತ ಹೆಜ್ಜೆ ಹಾಕುತ್ತಿಲ್ಲ ಇದರಿಂದ ನಮ್ಮ ವಸ್ತುಗಳು ವ್ಯಾಪಾರವಾಗದೆ ಹಾಳಾಗುತ್ತಿದ್ದಾವೆ ಇದರಿಂದ ನಮ್ಮ ಜೀವನ ತುಂಬಾ ತೊಂದರೆಗೊಳಗಾಗಿದೆ ಸರ್ಕಾರ ಇಂತಹ ನಿಯಮಗಳನ್ನು ಮುಂದುವರಿಸಿದರೆ ನಮಗೆ ಸಾವೊಂದೆ ಗತಿಯೆಂದು ಹೇಳುತ್ತಿದ್ದಾರೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಕೂಡ ಜನರು ಮಾರುಕಟ್ಟೆಗೆ ಬಂದು ವಸ್ತುಗಳನ್ನು ಖರೀದಿಸುತ್ತಿಲ್ಲ ಇನ್ನು ಇದೇ ರೀತಿಯಾಗಿ ಮುಂದುವರೆದರೆ ನಮ್ಮ ಪರಿಸ್ಥಿತಿ ಆ ದೇವರಿಗೆ ಪ್ರೀತಿ ಎಂದು ಗೋಳಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಬೀದಿ ವ್ಯಾಪಾರಿಗಳ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳದ ಸರ್ಕಾರ ಇಂಥವರಿಗೆ ಅಗತ್ಯ ಪರಿಹಾರ ಕ್ರಮಗಳನ್ನು ಒದಗಿಸಬೇಕು ಇಲ್ಲದಿದ್ದರೆ ಕೊರೋನಾದಂತಹ ರೋಗಗಳು ರೂಪಾಂತರ ಪಡೆದುಕೊಳ್ಳುತ್ತಾ ದೇಶದಲ್ಲಿ ಇನ್ನೂ ಕೆಲವು ವರ್ಷಗಳ ಕಾಲ ಉಳಿದುಕೊಂಡರೆ ಇಂಥವರ ಪರಿಸ್ಥಿತಿ ಏನಾಗಬಹುದು ಎನ್ನುವುದು ಊಹಿಸಿಕೊಳ್ಳುವುದು ಕೂಡ ಕಷ್ಟವಾಗುತ್ತದೆ