ಇಂಡಿ : ರಂಗ ಪಂಚಮಿ ಹಿನ್ನಲೆ ಭೀಮಾತೀರದಲ್ಲಿ ಪೊಲೀಸ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ ಹೇಳಿದರು. ಇಂಡಿ ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಂಗ ಪಂಚಮಿ ಮೆರವಣಿಗೆ ಹಿನ್ನಲೆ ಟಿಪ್ಪು ಸರ್ಕಲ್, ಬಸವೇಶ್ವರ ಸರ್ಕಲ್ ಸೇರಿದಂತೆ ವಿವಿಧ ಕಾಲೋನಿಯಲ್ಲಿ ಪೊಲೀಸ ನಿಯೋಜನೆ ಮಾಡಲಾಗಿದೆ.
ಅದಕ್ಕಾಗಿ ರಂಗ ಪಂಚಮಿಯಲ್ಲಿ ಅಹಿತಕರ ಘಟನೆಗಳು ಆಗಂದತೆ ಪೊಲೀಸ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಇನ್ನು ಮೆರವಣಿಗೆಯನ್ನು ಸಂಭ್ರಮದಿಂದ ಆಚರಣೆ ಮಾಡಬೇಕು ಅಷ್ಟೆ. ಅದನ್ನು ಬಿಟ್ಟು ಬೇರೆ ರೀತಿಯ ಕೆಲಸಕ್ಕೆ ಕೈ ಹಾಕಬಾರದು ಎಂದು ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದರು. ಇದೇ ವೇಳೆಯಲ್ಲಿ ಪಟ್ಟಣಾದ್ಯಂತ ಡಿವೈಎಸ್ಪಿ ದೊಡ್ಡಿ ನೇತೃತ್ವದಲ್ಲಿ ರೂಟ್ ಮಾರ್ಚ್ ಮಾಡಲಾಯಿತು.